ಅಂಚೆ ಕಚೇರಿಯ ವಿಶೇಷ ಸೇವೆಯಾದ ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸಲು ಅಂಚೆ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದು, ಸೆಪ್ಟೆಂಬರ್ 1ಕ್ಕೆ ರಿಜಿಸ್ಟರ್ಡ್ ಪೋಸ್ಟ್ ಗೆ ಅಂತಿಮ ವಿದಾಯ ಹೇಳಲಾಗುತ್ತಿದೆ.

ಅಂದು ಅಂಚೆ ಕಚೇರಿಯ ರಿಜಿಸ್ಟರ್ಡ್ ಪೋಸ್ಟ್ ಮತ್ತು ಸ್ಪೀಡ್ ಪೋಸ್ಟ್ ಸೇವೆ ವಿಲೀನಗೊಳ್ಳಲಿದೆ. ರಿಜಿಸ್ಟರ್ಡ್ ಪೋಸ್ಟ್ ಎಂದು ಹೆಸರಿಸಲಾಗಿರುವ ಅಂಚೆ ಕಚೇರಿಯ ಎಲ್ಲಾ ಕಾರ್ಯಾತ್ಮಕ ಮಾರ್ಗಸೂಚಿಗಳಲ್ಲಿ ಜು.31ರೊಳಗೆ ತಿದ್ದುಪಡಿ ಮಾಡಲು ಸೂಚಿಸಲಾಗಿದೆ.




