ಉಪ್ಪಳ: ಕಣ್ಣೂರು ವಿಶ್ವವಿದ್ಯಾಲಯದ ಬಿ ಎ ಕನ್ನಡ ಡಿಗ್ರಿ ಫಲಿತಾಂಶ ದಲ್ಲಿ
ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಮಂಜೇಶ್ವರದ ವಿದ್ಯಾರ್ಥಿನಿ ಕು. ಆದಿಶ್ರೀ ಎಸ್ ಪ್ರಥಮ ರ‍್ಯಾಂಕ್ ನೊಂದಿಗೆ ಉತ್ತೀ ರ್ನಳಾ ಗಿರುತ್ತಾಳೆ. ಈಕೆ ಬಾಯಿಕಟ್ಟೆ ನಿವಾಸಿಯಾದ ನಾರಾಯಣ ಶೆಟ್ಟಿಗಾರ ಶಶಿಕಲ ದಂಪತಿಗಳ ಪುತ್ರಿ. ಮೀಯಪದವು ಹಾಗೂ ಪೈವಳಿಕೆ ಶಾಲೆಯ ಹಳೆ ವಿದ್ಯಾರ್ಥಿನಿ. ಈಕೆ ನೃತ್ಯ ಹಾಗು ಯಕ್ಷಗಾನ ಕಲಾವಿದೆಯಾಗಿದ್ದಾಳೆ