ಕುಂಬಳೆ: ಕುಂಬಳೆ ಮೈಮೂನ್ ನಗರದಲ್ಲಿ ಪದವಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ಶನಿವಾರ ಸಂಜೆ ನಡೆದಿದೆ. ಸೀತಾಂಗೋಳಿಯ ಖಾಸಗಿ ಕಾಲೇಜು ವಿದ್ಯಾರ್ಥಿಯೂ, ಕುಂಬಳೆ ಮೈಮೂನ್ ನಗರದ ಹಸನ್ ಎಂಬವರ ಪುತ್ರನಾದ ಮುಹಮ್ಮದ್ ಅಜ್ಜರ್ ಯಾನೆ ಅಜ್ಜು (19) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.

ತಂದೆ, ತಾಯಿ ಖದೀಜ, ಸಹೋದರನಾದ ಅಬ್ದುಲ್ಲ ಮನೆಯಿಂದ ಹೊರಗೆ ಹೋಗಿದ್ದರು. ಅಬ್ದುಲ್ಲರಿಗೆ ಹೊಸ ಬುಲ್ಲೆಟ್ ಬೈಕ್ ಖರೀದಿಸಲೆಂದು ತೆರಳಿದ್ದರೆನ್ನಲಾಗಿದೆ. ಈ ವೇಳೆ ಜತೆಗೆ ಬರುವಂತೆ ಒತ್ತಾಯಿಸಿದರೂ ಆಟವಾಡಲು ಹೋಗಲಿದೆ ಎಂದು ತಿಳಿಸಿ ಅಜ್ಜರ್ ಬಂದಿಲ್ಲವೆಂದು ಅಬ್ದುಲ್ಲ ತಿಳಿಸಿದ್ದಾರೆ. ಇವರು ಸಂಜೆ ಮನೆಗೆ ಮರಳಿದಾಗ ಮನೆಯ ಒಳಗಿನಿಂದ ಚಿಲಕ ಹಾಕಿದ ಸ್ಥಿತಿಯಲ್ಲಿತ್ತು. ಕರೆದರೂ ಬಾಗಿಲು ತೆರೆಯದಿರುವುದರಿಂದ ನೆರೆಮನೆ ನಿವಾಸಿಗಳು ಸಹಿತ ತಲುಪಿ ಬಾಗಿಲು ತೆರೆದಾಗ ಮುಹಮ್ಮದ್ ಅಜ್ಜಲ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಕೂಡಲೇ ಆತನನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.
ಮೃತರು ತಂದೆ, ತಾಯಿ, ಇತರ ಸಹೋದರರಾದ ಸೀನತ್, ಸಫೀದ, ಅರ್ಫಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.




