ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಸರಕಾರಿ ಇಂಜಿನಿಯರಿಂಗ್‌ ಕಾಲೇಜು ಆರಂಭಕ್ಕೆ ಗ್ರೀನ್ ಸಿಗ್ನಲ್; ಯಾವೆಲ್ಲಾ ಕೋರ್ಸ್ ಗಳಿರಲಿವೆ?

Share with

ಕಾಸರಗೋಡು: ಕಾಸರಗೋಡು ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಪರಿಗಣಿಸಿ ಎಲ್ಲರಿಗೂ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸುವ ಸಲುವಾಗಿ ಕೇರಳ ಸರಕಾರ 2025-26ರ ಬಜೆಟ್‌ನಲ್ಲಿ ಘೋಷಿಸಿದ್ದ ಕಾಸರಗೋಡಿನ ಚೆರುವತ್ತೂರಿನಲ್ಲಿ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿಗೆ ಆಡಳಿತಾನುಮತಿ ಲಭಿಸಿದೆ.

ಚೆರುವತ್ತೂರಿನಲ್ಲಿ ಸರಕಾರಿ ಎಂಜಿನಿಯರಿಂಗ್‌ ಕಾಲೇಜು ಆರಂಭಕ್ಕೆ ಕಣ್ಣೂರು ಎಂಜಿನಿಯರಿಂಗ್‌ ಕಾಲೇಜಿನ ಪ್ರಿನ್ಸಿಪಾಲರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ. ಅಸ್ತಿತ್ವದಲ್ಲಿರುವ ತಾಂತ್ರಿಕ ಪ್ರೌಢಶಾಲಾ ಕಟ್ಟಡದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸಲು ಮತ್ತು ಸಾಧ್ಯವಾದಷ್ಟು ಬೇಗ ಕೋರ್ಸ್‌ಗಳನ್ನು ಪ್ರಾರಂಭಿಸಲು ಸಕಾಲಿಕವಾಗಿ ಎಐಸಿಟಿಇ ಅನುಮೋದನೆ ಪಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ನೋಡಲ್‌ ಅಧಿಕಾರಿಗೆ ನೀಡಲಾಗಿದೆ. ಕಾಲೇಜು ಸ್ಥಾಪನೆಗೆ 3 ಕೋಟಿ 60 ಲಕ್ಷ ರೂ. ಮಂಜೂರುಗೊಳಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮತ್ತು ಶೈಕ್ಷಣಿಕವಾಗಿ ಪ್ರತಿಭಾನ್ವಿತರಾದ ಅನೇಕ ವಿದ್ಯಾರ್ಥಿಗಳಿದ್ದು, ಅವರಿಗೆ ಸರಕಾರಿ ಸ್ವಾಮ್ಯದ ಎಂಜಿನಿಯರಿಂಗ್‌ ಕಾಲೇಜು ಅತ್ಯಗತ್ಯವಾಗಿತ್ತು. ಚೆರುವತ್ತೂರಿನ ಸರಕಾರಿ ತಾಂತ್ರಿಕ ಪ್ರೌಢಶಾಲೆಯ ಆವರಣದಲ್ಲಿ ಹೊಸ ಪೀಳಿಗೆಯ ಕೋರ್ಸ್‌ಗಳು ಸೇರಿದಂತೆ ಬಿ.ಟೆಕ್‌ ಕೋರ್ಸ್‌ಗಳನ್ನು ಪ್ರಾರಂಭಿಸಲು ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಆರಂಭದಲ್ಲಿ ಇಲ್ಲಿ ಎಲೆಕ್ಟ್ರಿಕಲ್‌ ಮತ್ತು ಕಂಪ್ಯೂಟರ್‌ ಎಂಜಿನಿಯರಿಂಗ್‌, ಎಐ ಮತ್ತು ಡೇಟಾ ಸೈನ್ಸಸ್‌ ಮತ್ತು ರೊಬೋಟಿಕ್ಸ್‌ ಮತ್ತು ಎಐ ಕೋರ್ಸ್‌ಗಳು ಪ್ರಾರಂಭಗೊಳ್ಳಲಿವೆ. ಪ್ರಥಮವಾಗಿ ಎಐಸಿಟಿಇ ಅನುಮೋದನೆಗಾಗಿ ಎಂಜಿನಿಯರಿಂಗ್‌ ಮತ್ತು ತಂತ್ರಜ್ಞಾನ ಕಾರ್ಯಕ್ರಮಗಳನ್ನು ಪ್ರಾರಂಭಿಸಲು, ಕಾಲೇಜು ಕನಿಷ್ಠ ನಾಲ್ಕು ಕೋರ್ಸ್‌ಗಳನ್ನು ಒಳಗೊಂಡಿರಬೇಕು ಮತ್ತು ಕನಿಷ್ಠ ಮೂರು ಕೋರ್‌ ಕೋರ್ಸ್‌ಗಳು ಮತ್ತು ಒಂದು ಹೊಸ ಪೀಳಿಗೆಯ ಕೋರ್ಸ್‌ ಹೊಂದಿರಬೇಕು. ಇದಕ್ಕಾಗಿ ಕಂಪ್ಯೂಟರ್‌ ವಿಜ್ಞಾನ ಮತ್ತು ಎಂಜಿನಿಯರಿಂಗ್‌, ಎಲೆಕ್ಟ್ರಾನಿಕ್ಸ್‌ ಮತ್ತು ಸಂವಹನ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌, ರೊಬೊಟಿಕ್ಸ್ ಮತ್ತು ಎಐ ಕೋರ್ಸ್‌ಗಳಿರುತ್ತವೆ.

ಲಭ್ಯವಾಗುವ ಸೀಟುಗಳು

ಕಾಸರಗೋಡಿನ ಚೆರುವತ್ತೂರು ತಾಂತ್ರಿಕ ಪ್ರೌಢಶಾಲಾ ಆವರಣದಲ್ಲಿ ನಿರ್ಮಾಣಗೊಳ್ಳುವ ಈ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಸಂವಹನ ಎಂಜಿನಿಯರಿಂಗ್‌ 45 ಸೀಟುಗಳು, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ 45 ಸೀಟುಗಳು, ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ 45 ಸೀಟುಗಳು ಮತ್ತು ರೊಬೊಟಿಕ್ಸ್‌ ಮತ್ತು ಎಐಗೆ 45 ಸೀಟುಗಳು ಇರುತ್ತದೆ.

ಉಳಿದಂತೆ ಬಿ.ಟೆಕ್‌ ಎಲೆಕ್ಟ್ರಾನಿಕ್ಸ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ 45 ಸೀಟುಗಳು, ಬಿ.ಟೆಕ್‌ ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ 45 ಸೀಟುಗಳು, ಬಿ.ಟೆಕ್‌ ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ 45 ಸೀಟುಗಳು, ಬಿ.ಟೆಕ್‌ ರೊಬೋಟಿಕ್ಸ್‌ ಮತ್ತು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, 45 ಸೀಟುಗಳು ಹೊಂದಿದೆ.


Share with

Leave a Reply

Your email address will not be published. Required fields are marked *