ರಾಜ್ಯದ ಪ್ರಾಥಮಿಕ & ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲು ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಹಾಗಾಗಿ, ಸರ್ಕಾರಿ & ಖಾಸಗಿ ಶಾಲೆಯವರು ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ಶಿಕ್ಷಣ ಇಲಾಖೆಯ ಅನುಮತಿಗಾಗಿ ಕೆಲ ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕು.

*ಮುಖ್ಯ ಗುರುಗಳ ಮನವಿ. * ಶೈಕ್ಷಣಿಕ ಪ್ರವಾಸದ ಸ್ಥಳಗಳ ವೇಳಾಪಟ್ಟಿ. * ಪ್ರವಾಸಕ್ಕೆ ಹೋಗುವ ವಿದ್ಯಾರ್ಥಿಗಳ ಪಟ್ಟಿ. * ಪ್ರವಾಸಕ್ಕೆ ಹೋಗುವ ಶಿಕ್ಷಕರ ಪಟ್ಟಿ. * ವಿದ್ಯಾರ್ಥಿಗಳ ಪೋಷಕರ ಒಪ್ಪಿಗೆ ಪತ್ರ.
*ವಾಹನದ ನೋಂದಣಿ ಪ್ರತಿ. * ವಾಹನದ ಪರವಾನಗಿ ಪತ್ರ. *ವಾಹನದ ವಿಮೆ (ಇತ್ತೀಚಿನದು). * ಚಾಲಕನ ಪರವಾನಗಿ ಪತ್ರ(ಬ್ಯಾಡ್ಜ್). * ಆಡಳಿತ ಮಂಡಳಿಯ ಅನುಮತಿ ಪತ್ರ(ಖಾಸಗಿ ಶಾಲೆಗೆ). *SDMC ನಡಾವಳಿ ಪತ್ರ(ಸರ್ಕಾರಿ ಶಾಲೆಗೆ ಮಾತ್ರ). * ಮಕ್ಕಳ ಸುರಕ್ಷತೆ ಬಗ್ಗೆ ದೃಢೀಕರಣ. *ರಾಜ್ಯದೊಳಗೆ ಪ್ರವಾಸ ಕೈಗೊಳ್ಳುವ ಬಗ್ಗೆ ದೃಢೀಕರಣ. * ಪ್ರವಾಸ ದಿನಗಳನ್ನು ರಜಾ ಅವಧಿಗಳಲ್ಲಿ ಸರಿದೂಗಿಸುವ ಬಗ್ಗೆ ದೃಢೀಕರಣ ಪತ್ರ. * ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಪ್ರವಾಸಕ್ಕೆ ಕೊಂಡೊಯ್ಯುವ ಬಗ್ಗೆ ದೃಢೀಕರಣ ಪತ್ರ
ರಾಜ್ಯ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಪ್ರಮುಖ ಷರತ್ತುಗಳು
*ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲೇ ಕಡ್ಡಾಯವಾಗಿ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಬೇಕು. * ಈ ರೀತಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ಪ್ರವಾಸೋದ್ಯಮ ಇಲಾಖಾ ವಾಹನಗಳಲ್ಲಿ ಪ್ರವಾಸವನ್ನು ಕೈಗೊಳ್ಳುವಾಗ ನಿಗದಿಪಡಿಸಿದ ಸ್ಥಳಾವಕಾಶ ಮೀರದಂತೆ ಎಚ್ಚರವಹಿಸುವುದು. * ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳತಕ್ಕದ್ದು. *ಪ್ರತಿ ವರ್ಷ ಡಿಸೆಂಬರ ಮಾಹೆಯ ಅಂತ್ಯದೊಳಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು. * ಯಾವುದೇ ಕಾರಣಕ್ಕೂ ಡಿಸೆಂಬರ ನಂತರ ಶೈಕ್ಷಣಿಕ ಪ್ರವಾಸ ಕೈಗೊಳ್ಳದೇ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡುವುದು. * ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಇಲಾಖಾ ಅನುಮತಿಯನ್ನು ತಪ್ಪದೇ ಪಡೆದಿರಬೇಕು. * ಶೈಕ್ಷಣಿಕ ಪ್ರವಾಸಕ್ಕೆ ತೆರಳಲಿರುವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆಗೆ ಪಡೆಯಬೇಕು. * ಯಾವುದೇ ಕಾರಣಕ್ಕೂ ಖಾಸಗಿ ಹಾಗೂ ಮಿನಿ ಬಸ್ಗಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.




