ಗಲ್ಫ್ ಉದ್ಯೋಗಿ ಪತ್ನಿ ಮೇಲೆ ಮೀನು ಮಾರಾಟಗಾರನಿಂದ ಅತ್ಯಾಚಾರ ಆರೋಪ; ಕೇಸು ದಾಖಲು

Share with

ಬದಿಯಡ್ಕ: ಗಲ್ಫ್ ಉದ್ಯೋಗಿಯ ಪತ್ನಿಗೆ ಮದುವೆ ಭರವಸೆಯೊಡ್ಡಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ಸಂಬಂಧ ಮೀನು ಮಾರಾಟಗಾರನ ವಿರುದ್ಧ ಬದಿಯಡ್ಕ ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

ನೀರ್ಚಾಲು ಬೀಜಂತಡ್ಕ ನಿವಾಸಿಯಾದ ಅಬ್ದುಲ್ ಖಾದರ್ (45) ಎಂಬಾತನನ್ನು ಬಂಧಿಸಲಾಗಿದೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್‌ ವಿಧಿಸಿದೆ. ಬದಿಯಡ್ಕ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ 38ರ ಹರೆಯದ ಯುವತಿ ನೀಡಿದ ದೂರಿನಂತೆ ಪೊಲೀಸರು ಅಬ್ದುಲ್ ಖಾದರ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

2025 ಅಗೋಸ್ತ್ 1ರಿಂದ ವ್ಯಕ್ತಿ ತನಗೆ ಹಲವು ಬಾರಿ ಕಿರುಕುಳ ನೀಡಿದ್ದು, ಆ ದೃಶಗಳನ್ನು ಫೋನ್‌ನಲ್ಲಿ ಸೆರೆಹಿಡಿದಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ದೃಶ್ಯಗಳನ್ನು ಪತಿಗೆ ಕಳುಹಿಸಿಕೊಡುವುದಾಗಿ ಬೆದರಿಕೆಯೊಡ್ಡಿಯೂ ಮದುವೆ ಯಾಗುವುದಾಗಿ ಭರವಸೆ ನೀಡಿ ಕಿರುಕುಳಗೈದಿರುವುದಾಗಿ ದೂರ ಲಾಗಿದ. ಬಳಿಕ ಮದುವೆ ಭರವಸೆಯಿಂದ ಹಿಂಜರಿದ ಹಿನ್ನೆಲೆಯಲ್ಲಿ ಯುವತಿ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ.


Share with

Leave a Reply

Your email address will not be published. Required fields are marked *