ಕನ್ಯಾನ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಗುರು ವಂದನೆ, ಪಾದ ಪೂಜೆ

Share with

ವಿಟ್ಲ: ಕನ್ಯಾನ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಗುರು ಪೂರ್ಣಿಮೆಯ ಅಂಗವಾಗಿ ಪರಮಪೂಜ್ಯ ಶ್ರೀ  ಮಹಾಬಲೇಶ್ವರ ಸ್ವಾಮೀಜಿಯವರ ಪಾದ ಪೂಜೆ , ಗುರು ವಂದನಾ ಕಾರ್ಯಕ್ರಮ ನಡೆಯಿತು.
ಗುರು ವಂದನೆ, ಪಾದ ಪೂಜೆ ಸ್ವೀಕರಿಸಿದ ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ,  ಭಾರತೀಯತೆಯಲ್ಲಿ
ಗುರು ಸ್ಥಾನ ಎಲ್ಲಕ್ಕಿಂತಲೂ ಶ್ರೇಷ್ಠ ವೆನಿಸಿದೆ. ಒಳಗಣ್ಣು ತೆರೆದಾಗ ಜ್ಞಾನ ಸಾಕ್ಷಾತ್ಕಾರ ಸಿಗಲು ಸಾಧ್ಯ. ಪ್ರೀತಿಯಿಂದ ಜನ ಮನವನ್ನು ಗೆಲ್ಲಬಹುದು. ಸಾರ್ಥಕ ಬದುಕಿನ ಇಚ್ಛೆಯಿದ್ದಾಗ ಮುನ್ನಡೆಯಲು ಸಾಧ್ಯ. ಭಾರತೀಯ ಮಹಾನ್ ಋಷಿ ಮುನಿ ಪರಂಪರೆ ಸತ್ವ, ಶಕ್ತಿ ಎಲ್ಲೆಡೆ ಪಸರಿಸಲಿ. ಭಾರತ ಜಗತ್ತಿಗೆ ಮಹಾಗುರುವಾಗಲಿ ಎಂದು ಸಂದೇಶ ನೀಡಿದರು.

ಸಮಾರಂಭದಲ್ಲಿ ಗುರು ವಂದನೆ ನಡೆಸಿದ ಬಳಿಕ ಮಾತನಾಡಿದ ಶ್ರೀ ಚಾಮುಂಡೇಶ್ವರಿ ದೇವಿ ಟ್ರಸ್ಟ್ ನ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಸಣ್ಣಗುತ್ತು ಅಳಿಕೆ ಮಾತನಾಡಿ ಗುರು ಮತ್ತು ಗುರಿ ಇದ್ದಾಗ ಬದುಕು ಯಶಸ್ಸು. ಗುರು ಕಾರುಣ್ಯದಲ್ಲಿ ಆನಂದ, ನೆಮ್ಮದಿ ಪಡೆಯಲು ಸಾಧ್ಯ ಎಂದು ತಿಳಿಸಿದರು.

ಮಾತೃ ಮಂಡಳಿ ಸಮಿತಿ ಅಧ್ಯಕ್ಷೆ ಸುಜಾತಾ, ಯುವ ಸೇವಾ ಸಮಿತಿ ಅಧ್ಯಕ್ಷ ಶಾಂತಪ್ಪ ಬೇಂಗರೆ ಪಡ್ಪು, ಮನೋಜ್ ಕುಮಾರ್ ಬನಾರಿ ಉಪಸ್ಥಿತರಿದ್ದರು.

ಟ್ರಸ್ಟ್ ಕಾರ್ಯದರ್ಶಿ ಶ್ರೀ ಚಂದ್ರಶೇಖರ ಕಣಿಯೂರು ಆಶಯ ಗೀತೆ ಹಾಡಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಗುರು ಭಕ್ತರಿಂದ ಪೂಜ್ಯ ಸ್ವಾಮೀಜಿಯವರಿಗೆ ಗುರು ವಂದನೆ ನಡೆದು ಅನುಗ್ರಹ ಮಂತ್ರಾಕ್ಷತೆ ನೀಡಲಾಯಿತು.


Share with

Leave a Reply

Your email address will not be published. Required fields are marked *