ಹಬೀಬಿ.. ಉಬರ್ ನಲ್ಲಿ ಇನ್ಮುಂದೆ ಒಂಟೆ ರೈಡ್ ಮಾಡ್ಬೋದು!

Share with

ಉಬರ್, ಓಲಾ, ರ್ಯಾಪಿಡೋ ಮುಂತಾದ ಟ್ರಾನ್ಸ್ಫರ್ ಕಂಪನಿಗಳು ಒದಗಿಸುವ ಸೇವೆಯಿಂದ ಜನಸಾಮಾನ್ಯರ ಸಂಚಾರ ಸುಲಭವಾಗಿದೆ. ಸ್ಮಾರ್ಟ್ಫೋನ್ ಕೈಗೆತ್ತಿಕೊಂಡು ಒಂದೇ ಕ್ಲಿಕ್ನಲ್ಲಿ ಮನೆ ಬಾಗಿಲಿನಿಂದ ಬೇಕಾದ ಸ್ಥಳಕ್ಕೆ ಈ ಕಂಪನಿಗಳು ವರ್ಗಾವಣೆಯ ಸೇವೆಯನ್ನು ಒದಗಿಸುತ್ತದೆ. ಬೆಂಗಳೂರಿನಂತಹ ಬೃಹತ್ ಸಿಟಿಗಳಲ್ಲಿ ಓಲಾ, ಉಬರ್ ಸೇವೆಗಳು ಹೆಚ್ಚು ಬಳಕೆಯಲ್ಲಿರೋದನ್ನ ಗಮನಿಸಬಹುದು. ಆದರೆ ವಿಚಾರ ಅದಲ್ಲ ಮರುಭೂಮಿಯಲ್ಲೂ ಇದೀಗ ಉಬರ್ ಸೇವೆ ಶುರುವಾಗಿದೆ ಎಂದರೆ ನಂಬುತ್ತೀರಾ? ಒಂಟೆಯನ್ನು ಬಳಸಿ ಉಬರ್ ಸೇವೆ ನೀಡುತ್ತಿರುವ ವಿಚಾರ ಗೊತ್ತಾ? ಹಾಗಿದ್ರೆ ಈ ಸ್ಟೋರಿ ಓದಿ.

ದುಬೈನಲ್ಲಿ ಒಂಟೆಯನ್ನು ಮರುಭೂಮಿಯ ಹಡಗು ಎಂದು ಕರೆಯುತ್ತಾರೆ. ಮರುಭೂಮಿಯಲ್ಲಿ ಸಂಚರಿಸಲು ಅಲ್ಲಿಯವರು ಒಂಡೆಯನ್ನು ಬಳಸುತ್ತಾರೆ. ಅದರ ಮೂಲಕ ಪ್ರಯಾಣಿಸುತ್ತಾರೆ. ಆದರೆ ಅಚ್ಚರಿ ಸಂಗತಿ ಎಂದರೆ ಕಾರು, ಆಟೋದಂತೆಯೇ ಇದೀಗ ಮರುಭೂಮಿಯಲ್ಲಿ ಸಂಚರಿಸಲು ಒಂಟೆಯನ್ನು ಬುಕ್ ಮಾಡಬಹುದಾಗಿದೆ. ಉಬರ್ ಆ್ಯಪ್ ಮೂಲಕ ಒಂಟೆಯನ್ನು ಬುಕ್ ಮಾಡಿ ಸವಾರಿ ಮಾಡಬಹುದಾಗಿದೆ.
ಹೌದು. ಪ್ರವಾಸಿಗರೊಬ್ಬರು ಮರುಭೂಮಿಯಲ್ಲಿ ಉಬರ್ ಮೂಲಕ ಒಂಟೆ ಸವಾರಿಯನ್ನು ಬುಕ್ ಮಾಡಿದ್ದಾರೆ. ಬುಕ್ ಮಾಡಿದ ಸುಮಾರು 20 ಸೆಕೆಂಡುಗಳ ನಂತರ ಒಂಟೆ, ಮಹಿಳೆ ಬುಕ್ ಮಾಡಿದ್ದ ಸ್ಥಳಕ್ಕೆ ಬಂದಿದೆ. ಉಬರ್ ಮೂಲಕ ಬುಕ್ ಮಾಡಿರುವ ಒಂಟೆಯನ್ನು ಕಂಡು ಮಹಿಳೆ ಶಾಕ್ ಆಗಿದ್ದಾರೆ. ನಂತರ ಒಂಟೆಯ ಮೇಲೆ ಮಹಿಳೆ ಏರಿ ಅಲ್ಲಿಂದ ಪ್ರಯಾಣ ಬೆಳೆಸಿದ್ದಾರೆ.

ಕಾಲ ಬದಲಾಗಿದೆ. ಮನುಷ್ಯನಿಗೆ ಬೇಕಾಗುವ ಎಲ್ಲಾ ಸವಲತ್ತುಗಳು ನಿಮಿಷಾರ್ಧದಲ್ಲೇ ಸಿಗುತ್ತದೆ. ಸ್ಮಾರ್ಟ್ಫೋನ್ ಬಂದ ನಂತರವಂತೂ ಮನೆ ಬಾಗಿಲಿಗೆ ಎಲ್ಲಾ ವಸ್ತುಗಳು ತಲುಪುತ್ತದೆ. ಇದೀಗ ಕಾರು, ಆಟೋದಂತೆ ಒಂಟೆ ಮೇಲೆ ಕೂಡ ಪ್ರಯಾಣ ಮಾಡಬಹುದಾಗಿದೆ.


Share with

Leave a Reply

Your email address will not be published. Required fields are marked *