
ಕೂದಲಿನ ಆರೋಗ್ಯದಲ್ಲಿ ಬೀಟ್ರೂಟ್ ಹೇಗೆ ಸಹಕಾರಿ?
ವಿಟಮಿನ್ ಸಿ: ವಿಟಮಿನ್ ಸಿ ತನ್ನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದ್ದು, ಈ ಅಂಶವು ಬೀಟ್ರೂಟ್ ನಲ್ಲಿ ಹೇರಳವಾಗಿದೆ. ಇದು ಕೂದಲು ಕಿರುಚೀಲಗಳನ್ನು ಹಾನಿಗೊಳಿಸುವ ಹಾಗೂ ಕೂದಲು ಉದುರುವಿಕೆಗೆ ಕಾರಣವಾಗುವ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ಕೂದಲಿನ ರಚನೆಯನ್ನು ಕಾಪಾಡಿಕೊಳ್ಳಲು ಬೇಕಾದ ಕಾಲಜನ್ ಉತ್ಪಾದನೆಯಲ್ಲಿ ವಿಟಮಿನ್ ಸಿ ಸಹಕಾರಿಯಾಗಿದೆ.

- ಮೆಗ್ನೀಸಿಯಮ್ ಹಾಗೂ ರಂಜಕ: ಈ ಖನಿಜಗಳು ಕೂದಲಿನ ಬುಡವನ್ನು ಸುಧಾರಿಸಿ ಕೂದಲು ಉದುರುವುದನ್ನು ತಡೆಯುತ್ತದೆ.
- ಪೊಟ್ಯಾಸಿಯಮ್: ಬೀಟ್ರೂಟ್ ನಲ್ಲಿರುವ ಪೊಟ್ಯಾಸಿಯಮ್ ನೆತ್ತಿಯನ್ನು ಪೋಷಿಸಲು, ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ.
- ಕಬ್ಬಿಣಾಂಶ: ರಕ್ತ ಪರಿಚಲನೆಗೆ ಕಬ್ಬಿಣಾಂಶ ಅತ್ಯಗತ್ಯವಾಗಿ ಬೇಕು. ಇದು ನೆತ್ತಿಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶಗಳನ್ನು ತಲುಪಿಸಲು ಸಹಕಾರಿಯಾಗಿದೆ. ಆರೋಗ್ಯಕರ ನೆತ್ತಿಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
- ಫೋಲಿಕ್ ಆಮ್ಲ : ಫೋಲಿಕ್ ಆಮ್ಲವು ಕೂದಲಿನ ಕಿರುಚೀಲಗಳ ಪುನರುತ್ಪಾದನೆಗೆ ಸಹಾಯ ಮಾಡುವುದರೊಂದಿಗೆ ದಪ್ಪ ಹಾಗೂ ನೀಳವಾದ ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ.
- ಬೀಟೈನ್ಗಳು: ಕೂದಲಿನ ಬುಡವನ್ನು ಹೈಡ್ರೇಟ್ ಮಾಡಲು ಹಾಗೂ ರಕ್ಷಿಸುವ ಬೀಟೈನ್ಗಳನ್ನು ಸಹಾಯಕವಾಗಿದೆ. ಇದು ಕೂದಲಿಗೆ ನೈಸರ್ಗಿಕ ಹೊಳಪು ನೀಡುವುದಲ್ಲದೆ ಮೃದುತ್ವವನ್ನು ನೀಡುತ್ತದೆ.




