ಬಾರದ ಹಾಲ್ ಟಿಕೆಟ್.. ಪರೀಕ್ಷೆಯಿಂದ ವಂಚಿತರಾದ ಇಬ್ಬರು ವಿದ್ಯಾರ್ಥಿಗಳು..!

Share with

ಮಡಿಕೇರಿ: ಬೆಟ್ಟಗೇರಿ ಗ್ರಾಮದ ಶಾಲೆಯೊಂದರ ಇಬ್ಬರು ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಹಾಲ್‌ಟಿಕೆಟ್ ಲಭ್ಯವಾಗದೆ ಪರೀಕ್ಷೆ ಬರೆಯುವುದರಿಂದ ವಂಚಿತರಾ ಗಿದ್ದಾರೆ. ಶಾಲೆಯ 17 ಮಕ್ಕಳಲ್ಲಿ ಇಬ್ಬರು ಬಾಲಕರನ್ನು ಬಿಟ್ಟು ಉಳಿದವರೆಲ್ಲರಿಗೂ ಹಾಲ್ ಟಿಕೆಟ್ ಬಂದಿತ್ತು. ತಮೀಮ್ ಮತ್ತು ಪ್ರಥಮ್‌ಗೆ ಹಾಲ್ ಟಿಕೆಟ್ ಬಂದಿರಲಿಲ್ಲ.

ಹಾಲ್ ಟಿಕೆಟ್ ಬಾರದಿರುವ ವಿಷಯವನ್ನು ಮಂಗಳವಾರ ಸಂಜೆ ಶಾಲಾ ಪ್ರಾಂಶುಪಾಲರು ಮಕ್ಕಳ ಪೋಷಕರಿಗೆ ಕರೆ ಮಾಡಿ, ತಾಂತ್ರಿಕ ಸಮಸ್ಯೆಯಿಂದ ಇಬ್ಬರಿಗೆ ಹಾಲ್ ಟಿಕೆಟ್ ಬಂದಿಲ್ಲ ಎಂದು ತಿಳಿಸಿದ್ದಾರೆ. ಬುಧವಾರ ಬೆಳಗ್ಗೆ ಶಾಲೆ ಬಳಿ ಬಂದು ಹಾಲ್ ಟಿಕೆಟ್ ಕೊಡುವಂತೆ ಪೋಷಕರು ಆಗ್ರಹಿಸಿದರು. ನ್ಯಾಯ ಕೊಡಿಸುವಂತೆ ಆಗ್ರಹಿಸಿ ಪೋಷಕರು, ಗ್ರಾಮಸ್ಥರು ಶಾಲೆ ಬಳಿ ಪ್ರತಿಭಟನೆ ನಡೆಸಿದರು.

ಶಾಲಾ ಸಿಬಂದಿ ಸರಿಯಾಗಿ ಲಾಗಿನ್ ಆಗಿ ವಿದ್ಯಾರ್ಥಿಗಳ ವಿವರವನ್ನು ಭರ್ತಿ ಮಾಡದಿರುವುದರಿಂದ ಈ ಸಮಸ್ಯೆ ಯಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ಹಂತದಲ್ಲಿ ನಡೆಯುವ ಪರೀಕ್ಷೆಗಾದರೂ ಅವಕಾಶ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *