ಪೈವಳಿಕೆ: ಕಯ್ಯಾರ್ ಅಶ್ವತ್ಥಕಟ್ಟೆ ನಾರಾಯಣ ಪೂಜಾರಿ ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಪತ್ನಿ ವೇದಾವತಿಯವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುವುದರೊಟ್ಟಿಗೆ ಮೂರು ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಭಾರವನ್ನೂ ಹೊತ್ತಿರುತ್ತಾರೆ.
ಇದನ್ನು ಅರಿತ ಬಿರುವೆರ್ ಕುಡ್ಲ ಮಂಜೇಶ್ವರ ತಾಲೂಕು ಘಟಕದ ಪದಾಧಿಕಾರಿಗಳಾದ ಶೀನಪ್ಪ ಪೂಜಾರಿ ಅಲಾರ್ ದುರ್ಗಿಪಳ್ಳ, ಐತ್ತಪ್ಪ ಪೂಜಾರಿ ಅರಿಯಾಳ, ಜಯಂತಿ ಪೈವಳಿಕೆ, ಅನಿಲ್ ಪ್ರತಾಪನಗರ, ಹರಿಣಾಕ್ಷಿ ಪ್ರತಾಪನಗರ ಇವರು ಮನೆಗೆ ಭೇಟಿ ನೀಡಿ ಸಹಾಯ ಧನ ಹಸ್ತಾಂತರಿಸಿ ಸಾಂತ್ವನವನ್ನು ಹೇಳಿದರು.