ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸುಧಾರಕ ಸಂಘದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಸಹಾಯಧನ ಹಸ್ತಾಂತರ

Share with

ಬಂಟ್ವಾಳ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ರೂ. 3 ಲಕ್ಷದ ಡಿಡಿ ಕಟ್ಟಡ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ನಾವೂರರವರಿಗೆ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮತ್ತು ಯೋಜನಾಧಿಕಾರಿ ಮಾಧವ ಗೌಡರವರ ಮುಖೇನ ಜ.18ರಂದು ಪೊಸಳ್ಳಿ ಕುಲಾಲ ಭವನದಲ್ಲಿ ಹಸ್ತಾಂತರಿಸಿದರು.

ಸುಧಾರಕ ಸಂಘದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಸಹಾಯಧನ ಹಸ್ತಾಂತರ

ಈ ಸಂದರ್ಭದಲ್ಲಿ ಯೋಜನೆಯ ಮೇಲ್ವಿಚಾರಕ ವೇದಾವತಿ, ಒಕ್ಕೂಟದ ಅಧ್ಯಕ್ಷ ಹೇಮಾವತಿ, ಸೇವಾ ಪ್ರತಿನಿಧಿಗಳು, ಪುರಸಭಾ ಸದಸ್ಯ ಹರಿಪ್ರಸಾದ್ ಭಂಡಾರಿಬೆಟ್ಟು, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಮೀನಾಕ್ಷಿ ಅಲೆತ್ತೂರು, ಮನೋಹರ ನೇರಂಬೋಳು, ಸುಕುಮಾರ್ ಬಂಟ್ವಾಳ, ನಾರಾಯಣ್ ಸಿ ಪೆರ್ನೆ, ರಮೇಶ್ ಕೈಕುಂಜೆ, ಸತೀಶ್ ಕುಲಾಲ್, ಲಕ್ಷ್ಮಣ ಅಗ್ರಬೈಲು, ನಾಗೇಶ್ ಬಾಳೆಹಿತ್ಲು, ಜನಾರ್ಧನ ಪೊಸಳ್ಳಿ, ಮಚ್ಚೇಂದ್ರ ಸಾಲಿಯಾನ್, ಕಟ್ಟಡ ಕಾಮಗಾರಿಯ ಗುತ್ತಿಗೆದಾರ ಹರೀಶ್ ಭಂಡಾರಿಬೆಟ್ಟು ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *