ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ 2023-24ನೇ ಆರ್ಥಿಕ ವರ್ಷದ ಯೋಜನೆಗೊಳಪಡಿಸಿ ಬಣ್ಪುತ್ತಡ್ಕ ಶ್ರೀದುರ್ಗಾಪರಮೇಶ್ವರಿ ಎಯುಪಿ ಶಾಲೆಗಾಗಿ ಸುಮಾರು 5ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮಾದರಿ ಶೌಚಾಲಯದ ಹಸ್ತಾಂತರ ಜ.18ರಂದು ಜರಗಿತು.
ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಯೋಜನೆಯನ್ನು ಹಸ್ತಾಂತರಿಸಿದರು. ಗ್ರಾ.ಪಂ.ಸದಸ್ಯ ಕುಸುಮಾವತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.
ಪಂ.ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ , ಗ್ರಾ.ಪಂ.ಸದಸ್ಯ ರಾಧಕೃಷ್ಣ ನಾಯಕ್ ಶೇಣಿ, ಶಾಲಾ ಪ್ರಬಂಧಕ ವೇಣುಗೋಪಾಲ್ ಎಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ಮೊದಲಾದವರು ಪಾಲ್ಗೊಂಡಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಸರೋಜ ಎಂ ಸ್ವಾಗತಿಸಿ ಅಧ್ಯಾಪಕ ಸಜು ಟಿ.ವಿ ವಂದಿಸಿದರು. ಪ್ರವೀಣ್ ಕುಮಾರ್ ಅಡಿಗ ನಿರೂಪಿಸಿದರು.