
ಉಪ್ಪಳ: ಕಡಲ್ಕೊರೆತ ವ್ಯಾಪಕಗೊಂಡಿರುವAತೆ ಉಪ್ಪಳ ಬಳಿಯ ಹನುಮಾನ್ನಗರದಲ್ಲಿ ಸಮುದ್ರ ತೀರ ರಸ್ತೆ ನೀರು ಪಾಲಾಗುವ ಸಾದ್ಯತೆ ಕಂಡುಬರುತ್ತಿದ್ದು, ಇದರಿಂದ ಈ ಪರಿಸರದ ಮೀನು ಕಾರ್ಮಿಕರು ಆತಂಕಗೊAಡಿದ್ದಾರೆ. ಕಳೆದ ವರ್ಷ ಸರಕಾರದ ಅಭಿವೃದ್ದಿ ಪಂಡ್ನಿAದ ಭಾರೀ ವೆಚ್ಚದಿಂದ ಈ ಪರಿಸರದಲ್ಲಿ ಸುಮಾರು ಒಂದು ಕಿಲೋ ಮೀಟರ್ ಉದ್ದಕ್ಕೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ಈ ವೇಳೆ ನಿರ್ಮಿಸಿದ ಕಗ್ಗಲ್ಲಿನ ತಡೆಗೋಡೆ ಅವ್ಯವಸ್ಥೆಯಿಂದ ಕೂಡಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಕಡಲ್ಕೊರೆತದಿಂದ ತಡೆಗೋಡೆ ಸಮುದ್ರ ಪಾಲಾಗುತ್ತಿದ್ದು, ನೀರು ರಸ್ತೆ ತನಕ ತಲುಪುತ್ತಿದೆ. ಇದೇ ರೀತಿ ಮುಂದುವರಿದರೆ ರಸ್ತೆ ನೀರುಪಾಲಾದಲ್ಲಿ ಪರಿಸರದ ಹಲವು ಮೀನು ಕಾರ್ಮಿಕರ ಮನೆಗಳು ಅಪಾಯದಂಚಿಗೆ ತಲುಪಲಿದೆ. ಪ್ರದೇಶದಲ್ಲಿ ಸುಮಾರು ೩೦೦ರಷ್ಟು ಮೀನು ಕಾರ್ಮಿಕರ ಕುಟುಂಬ ವಾಸವಾಗಿದ್ದು, ರಸ್ತೆ ಸಮುದ್ರ ಪಾಲಾದಲ್ಲಿ ಕುಟುಂಬಗಳ ಕೆಲಸ ಕಾರ್ಯಗಳು ಸಂಪೂರ್ಣಮೊಟಕುಗೊಳ್ಳಲಿದೆ. ಇಲ್ಲಿನ ಮೀನು ಗಾರರು ದೋಣಿಗೆ ಮೂಸೋಡಿಯಲ್ಲಿರುವ ಹಾರ್ಬಾರ್ಗೆ ದ್ವಿಚಕ್ರ, ತ್ರಿಚಕ್ರ ವಾಹನದ ಮೂಲಕ ಈ ರಸ್ತೆಯನ್ನೇ ಅವಲಂಭಿಸುತ್ತಿದ್ದಾರೆ. ಈ ರಸ್ತೆ ನಷ್ಟಗೊಂಡಲ್ಲಿ ಮೀನುಗಾರರು ಭಾರೀ ತೊಂದರೆಗೆ ಸಿಲುಕಲಿದ್ದಾರೆ. ಸಂಬoಧಪಟ್ಟ ಅಧಿಕಾರಿಗಳು ವ್ಯವಸ್ಥಿತ ರೀತಿಯಲ್ಲಿ ತಡೆಗೋಡೆ ನಿರ್ಮಿಸಲು ಊರವರು ಒತ್ತಾಯಿಸಿದ್ದಾರೆ.





