
ಉಪ್ಪಳ :ಉಪ್ಪಳ ಹನುಮಾನ್ ನಗರದಿಂದ ಶುರುವಾಗಿ ಮಣಿ ಮುಂಡ ತನಕ ಹಾರ್ಬರ್ ನಿಧಿಯಿಂದ ನಿರ್ಮಿಸಿದ ಕಾಂಕ್ರೀಟ್ ರಸ್ತೆ ಕಡಲ ಕಡಲ್ಕೋರೆತ ದಿಂದ ಹಾಳಾಗಿದೆ. ಹೊಸ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿ ಒಂದು ವರ್ಷವೂ ಕಳೆದಿಲ್ಲ. ಸುಮಾರು 100 ಮೀಟರ್ ವರೆಗೆ ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದೆ. ಈಗ ರಸ್ತೆ ದುರ್ಗಮವಾಗಿದೆ. ಆದಷ್ಟು ಬೇಗ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಿ ರಸ್ತೆ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಬೇಕೆಂದು ಎಂ.ಎಲ್.ಅಶ್ವಿನಿ ಆಗ್ರಹಿಸಿದರು. ಪಕ್ಷ ಮತ್ತು ನನ್ನಿಂದ ಸಾಧ್ಯವಿರುವ ಎಲ್ಲಾ ಸಹಾಯ ಮತ್ತು ಬೆಂಬಲವಿದೆ ಎಂದು ಬಿಜೆಪಿ ನೇತಾರೆ. ಬ್ಲಾಕ್ ಪಂಚಾಯತ್ ಸದಸ್ಯೆ ಎಂ.ಎಲ್.ಅಶ್ವಿನಿ ಕಾರ್ಯಕರ್ತರಿಗೆ ಭರವಸೆ ನೀಡಿದರು. ಇಂದು ಜಿಲ್ಲಾಧಿಕಾರಿಯನ್ನು ದೂರವಾಣಿಯಲ್ಲಿ ಸಂಪರ್ಕಿಸಿ ರಸ್ತೆ ಮುರಿದು ಹೋಗಿದ್ದು, ಅದಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡ ಕೆ.ಪಿ.ವಲ್ಸರಾಜ್ ಜತೆಗಿದ್ದರು.ಹನುಮಾನ್ ನಗರ ಬೂತ್ ಪ್ರಮುಖರಾದ ಜ್ಯೋತಿ ಕುಮಾರ ಐಲ, ಹಿರಿಯ ಮುಖಂಡರಾದ ಮಾಧವ ಸೇರಿದಂತೆ ಎಲ್ಲಾ ಪ್ರಮುಖ ಮುಖಂಡರುಕಾರ್ಯಕರ್ತರು,ಊರವರು ಜೊತೆಗಿದ್ದರು.





