ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಧಾನ್ಯಲಕ್ಷ್ಮೀ ಕೃಷಿ ಯೋಜನೆಯಡಿಯಲ್ಲಿ ’ಕೊಯ್ಲು ಉತ್ಸವ’

Share with

ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಧಾನ್ಯಲಕ್ಷ್ಮಿ ಕೃಷಿ ಯೋಜನೆಯಡಿಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಭತ್ತವನ್ನು ಕಟಾವು ಮಾಡುವ ವರ್ಷಂಪ್ರತಿ ನಡೆಯುವ “ಕೊಯ್ಲು ಉತ್ಸವವು” ನ.16 ರಂದು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.

ವೇದಿಕೆಯಲ್ಲಿ ಹಿರಿಯ ಕೃಷಿಕರಾದ ಶ್ರೀಮತಿ ಕಮಲಾ ಹೇರೂರು, ಮಂಗಳೂರಿನ ಮಡಿಲು ಸೇವಾ ತಂಡದ ಅಧ್ಯಕ್ಷರಾದ ಶ್ರೀ ಗಜೇಂದ್ರ ಪೂಜಾರಿ, ಮೀಂಜ ಪಂಚಾಯತಿನ ಮಜೀರ್‌ಪಳ್ಳ ವಾರ್ಡಿನ ಸದಸ್ಯರೂ, ಕ್ಷೇಮ ಕಾರ್ಯಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಬಾಬು ಕುಳೂರು, ಹಿರಿಯ ಕೃಷಿಕರಾದ ಚೆರುಗೋಳಿಯ ಶ್ರೀ ಬಾಲಕೃಷ್ಣಪಡ್ಡು ಉಪಸ್ಥಿತರಿದ್ದರು. ಪರಮಪೂಜ್ಯ ಸ್ವಾಮೀಜಿಯವರು ದೀಪ ಪ್ರಜ್ವಲನೆಯ ಮೂಲಕ ಸಾಂಪ್ರದಾಯಿಕವಾಗಿ ಕೊಯ್ದು ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ತಮ್ಮ ಬ್ಬರೂ ಬಳಸಲು ಸಾವಯವ ರ್ವಚನದಲ್ಲಿ ವಿಷಮುಕ್ತ ಆಹಾರವನ್ನು ನಾವೆಲ್ಲರೂ ಬಳಸ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡು “ನಮ್ಮ ಅಡುಗೆ ಕೋಣೆಯನ್ನು ಔಷದಾಲಯವಾಗಿಸಿ ಭಾರತವನ್ನ ಈ ಶ ಶ್ರೀಮಂತಗೊಳಿಸೋಣ” ಎಂದು ಕರೆ ನೀಡಿದರು. ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿನಿಯರಾದ ಶ್ಲಾನ್ಯ ಸಮೃತ,ಯಶಿತರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ನಿರೂಪಣೆಯನ್ನು ಆಶ್ರಮದ ಕಾರ್ಯಕರ್ತರಾದ ಶ್ರೀ ಸದಾಶಿವ ಮೋಂತಿಮಾರ್ ಮಾಡಿ, ಸ್ವಾಗತಿಸಿ ವಂದಿಸಿದರು. ಬಳಿಕ ಪರಮಪೂಜ್ಯ ಸ್ವಾಮೀಜಿಯವರೊಂದಿಗೆ ಸೇರಿದ ಸಮಸ್ತರು ಮೆರವಣಿಗೆಯಲ್ಲಿ ಗದ್ದೆಗೆ ಹೋಗಿ ಭತ್ತ ಕಟಾವು ಮಾಡಲಾಯಿತು.


Share with

Leave a Reply

Your email address will not be published. Required fields are marked *