ಹಾವಂಜೆ ಇರ್ಮಾಡಿಬೀಡು ಅಬ್ಬಗ ದಾರಗ ಶ್ರೀ ವೀರಭದ್ರ ಸಪರಿವಾರ ದೇವಸ್ಥಾನ

Share with

ಉಡುಪಿ: ಹಾವಂಜೆ ಇರ್ಮಾಡಿಬೀಡು ಅಬ್ಬಗ ದಾರಗ ಶ್ರೀ ವೀರಭದ್ರ ಸಪರಿವಾರ ದೇವಸ್ಥಾನದ ಶ್ರೀ ನಾಗದೇವರ ಪುನಃಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ, ಶ್ರೀ ವೀರಭದ್ರ ಸ್ವಾಮಿಗೆ ಬ್ರಹ್ಮಕುಂಭಾಭಿಷೇಕ, ಅನ್ನಸಂತರ್ಪಣೆ ಹಾಗೂ ಕಾಲಾವಧಿ ಕಲ್ಕುಡ ಕೋಲವು ಎ. 29ರಿಂದ ಮೇ 2ರ ವರೆಗೆ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್. ನಾಗರಾಜ್ ಹೆಗ್ಡೆೆ ತಿಳಿಸಿದರು.
ಹಾವಂಜೆ ಇರ್ಮಾಡಿಬೀಡು ಅಬ್ಬಗ ದಾರಗ ಶ್ರೀ ವೀರಭದ್ರ ಸಪರಿವಾರ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಎ. 29ರ ಸಂಜೆ 5ರಿಂದ ಹೊರೆಕಾಣಿಕೆ ಸಮರ್ಪಣೆ, ಎ. 30ರ ಬೆಳಗ್ಗೆೆ 8ರಿಂದ ತೋರಣ ಮುಹೂರ್ತ, ಪುಣ್ಯಾಹ ನಾಂದಿ, ಅರಣಿ ಮಥನ, ಗಣಪತಿ ಹೋಮ, ಮೃತ್ಯುಂಜಯ ಹೋಮ, ದಾಸರಬೆಟ್ಟುವಿನಲ್ಲಿರುವ ನೀಚ ನಾಗ ಪುನಃಪ್ರತಿಷ್ಠೆೆ, ಸಂಜೆ 5ರಿಂದ ವೀರಭದ್ರ ಸ್ವಾಮಿ ಸಾನ್ನಿಧ್ಯದಲ್ಲಿ ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ಇಂದ್ರಾದಿ ಬಲಿ, ಕಲ್ಕುಡ ಸಾನ್ನಿಧ್ಯದಲ್ಲಿ ಭೂ ಶುದ್ಧಿ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಇಂದ್ರಾದಿ ಬಲಿ ಜರುಗಲಿದೆ.
ಮೇ 1ರ ಬೆಳಗ್ಗೆೆ 8ರಿಂದ ವೀರಭದ್ರ ಸ್ವಾಮಿ ಸಾನ್ನಿಧ್ಯದಲ್ಲಿ ನವಗ್ರಹ ಹೋಮ, ಚಂಡಿಕಾ ಹೋಮ, ಬಿಂಬ ಶುದ್ಧಿ ಪ್ರಕ್ರಿಯೆ, ಶಾಂತಿ-ಪ್ರಾಯಶ್ಚಿತ್ತ ಹೋಮಗಳು, ಕಲ್ಕುಡ ಸಾನ್ನಿಧ್ಯದಲ್ಲಿ ಕಲಶ ಪ್ರತಿಷ್ಠಾ ಪ್ರಧಾನ ಹೋಮ, ಕಲಶಾಭಿಷೇಕ, ಪ್ರಸನ್ನ ಪೂಜೆ, ಸಂಜೆ ವೀರಭದ್ರ ಸ್ವಾಾಮಿ ಸಾನ್ನಿಧ್ಯದಲ್ಲಿ ಅಘೋರ ಹೋಮ, 109 ಕಲಶಾಧಿವಾಸ, ಪ್ರಧಾನ ಹೋಮ, ನಾಗಬ್ರಹ್ಮ ಸಾನ್ನಿಧ್ಯದಲ್ಲಿ ಸಪ್ತ ಶುದ್ಧಿ, ವಾಸ್ತು ರಾಕ್ಷೋಘ್ನ, ಇಂದ್ರಾದಿ ಬಲಿ, ಬಿಂಬಾಧಿವಾಸ ನೆರವೇರಲಿದೆ.
ಮೇ 2ರ ಬೆಳಿಗ್ಗೆೆ 7ರಿಂದ ಪ್ರತಿಷ್ಠಾ
ಹೋಮ, 10.14ರಿಂದ ನಾಗ-ಬ್ರಹ್ಮದೇವರ ಪುನಃಪ್ರತಿಷ್ಠಾಪನೆ, ತಿಲ ಹೋಮ, ಕುಷ್ಮಾಂಡ ಹೋಮ, ಪವಮಾನ ಸೂಕ್ತ ಹೋಮ, ನಾಗಬ್ರಹ್ಮ ದೇವರಿಗೆ ಸ್ನಪನ ಕಲಶ ಪ್ರತಿಷ್ಠೆೆ, ಪ್ರಧಾನ ಹೋಮಗಳು, ಸರ್ಪ ಪ್ರಾಾಯಶ್ಚಿತ ರೂಪ ಆಶ್ಲೇಷಾಬಲಿ, ಕಲಶಾಭಿಷೇಕ, ಪ್ರಸನ್ನ ಪೂಜೆ, ವಟು ಆರಾಧನೆ, ಮಧ್ಯಾಾಹ್ನ 12ಕ್ಕೆೆ ವೀರಭದ್ರ ದೇವರಿಗೆ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಅನ್ನಸಂತರ್ಪಣೆ, ಸಂಜೆ 4.30ಕ್ಕೆೆ ನಾಗದೇವರ ಸಾನ್ನಿಧ್ಯದಲ್ಲಿ ಭೋಗ ದೀಪಾರಾಧನೆ, ನಾಗದರ್ಶನ ಸೇವೆ ಹಾಗೂ ರಾತ್ರಿ 9ರಿಂದ ಕಲ್ಕುಡ ಕೋಲ ನಡೆಯಲಿದೆ ಎಂದು ಅವರು ತಿಳಿಸಿದರು.
ಮೇ 1ರ ಮಧ್ಯಾಹ್ನ 3ರಿಂದ ನಡೆಯಲಿರುವ ಧಾರ್ಮಿಕ ಸಭೆಯನ್ನು ಇರ್ಮಾಡಿ ಬೀಡು ಫ್ಯಾಮಿಲಿ ಟ್ರಸ್‌ಟ್‌‌ನ ಹಿರಿಯರಾದ ಪ್ರಸನ್ನ ಹೆಗ್ಡೆೆ, ನಿಟ್ಟೆೆ ವಿದ್ಯಾ ಸಮೂಹ ಸಂಸ್ಥೆೆಗಳ ಕುಲಪತಿ ಎನ್. ವಿನಯ್ ಹೆಗ್ಡೆೆ, ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆೆ ಉದ್ಘಾಾಟಿಸಲಿದ್ದಾರೆ. ಇರ್ಮಾಡಿ ಫ್ಯಾಮಿಲಿ ಟೆಂಪಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷ ಐ. ಜಯಪ್ರಸಾದ್ ಶೆಟ್ಟಿ ಇರ್ಮಾಡಿಬೀಡು ಅಧ್ಯಕ್ಷತೆ ವಹಿಸಲಿದ್ದಾರೆ. 
ಮಾಜಿ ಲೋಕಾಯುಕ್ತ ವಿಶ್ವನಾಥ ಶೆಟ್ಟಿ, ಉದ್ಯಮಿ ಶಿವರಾಮ ಬಿ. ಶೆಟ್ಟಿ ಇರ್ಮಾಡಿ ಶೆಟ್ಟಿಬೆಟ್ಟು, ಇರ್ಮಾಡಿಬೀಡುವಿನ ಲೀಲಾ ಎಸ್. ಶೆಟ್ಟಿ, ವಿಜಯಲಕ್ಷ್ಮೀ ಯು. ಹೆಗ್ಡೆೆ, ರಾಧಾ ಎಸ್. ಹೆಗ್ಡೆೆ ಕೊಡವೂರು, ನಾರಾಯಣ ಶೆಟ್ಟಿ ತೋನ್ಸೆೆ ಬಡಾಮನೆ, ಕೃಷ್ಣ ಶೆಟ್ಟಿ ಆದಿಉಡುಪಿ, ಅರುಣ್ ಶೆಟ್ಟಿ ತೋನ್ಸೆೆ ತೆಂಕುಮನೆ, ಅಮೃತಾ ರಾಜೀವ ಆಳ್ವ ಬೆಳ್ಳಂಪಳ್ಳಿ ಹಳೆಮನೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೇದ ಮೂರ್ತಿ ಗುರುರಾಜ್ ಭಟ್ ಕೊಳಲಗಿರಿ, ಕಾರ್ಯದರ್ಶಿ ಸುರೇಶ್ ಬಿ. ಶೆಟ್ಟಿ ಶೆಟ್ಟಿಬೆಟ್ಟು, ಕೋಶಾಧಿಕಾರಿ ರಕ್ಷಿತ್ ಶೆಟ್ಟಿ, ಮಲ್ಲಿಕಾರ್ಜುನ ಶೆಟ್ಟಿ ಇರ್ಮಾಡಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *