ವಿಶ್ವದ ಅತ್ಯಂತ ದುಬಾರಿ ನೈಲ್‌ ಫಾಲಿಶ್‌ ನೋಡಿದ್ದೀರಾ..? ಇದರ ಬೆಲೆ ಬರೋಬ್ಬರಿ‌ 1ಕೋಟಿ 90 ಲಕ್ಷ..! ‌ಅಷ್ಟಕ್ಕೂ ಏನಿದರ ವಿಶೇಷತೆ?

Share with

ಬೆಂಗಳೂರು: ಉಗುರುಗಳ ಅಂದವನ್ನು ಹೆಚ್ಚಿಸುವ ನೇಲ್ ಪಾಲಿಶ್ ಎಂದರೆ ಪ್ರತೀ ಹೆಣ್ಣಿಗೂ ಅಚ್ಚು ಮೆಚ್ಚು. ಸಾಮಾನ್ಯವಾಗಿ ನೇಲ್​​ ಪಾಲಿಶ್​ ಗಳಿಗೆ 100ರೂ. ಒಳಗಡೆ ಇರುತ್ತದೆ. ಅದರಲ್ಲೂ ಸ್ವಲ್ಪ ದುಬಾರಿ ಬೆಲೆ ಅಂದರೆ ಹೆಚ್ಚೆಂದರೆ 500 ರೂ. ಆದರೆ ಎಂದಾದರೂ ಕೋಟಿ ಬೆಲೆ ಬಾಳುವ ನೇಲ್​ ಪಾಲಿಶ್​ ಬಗ್ಗೆ ಕೇಳಿದ್ದೀರಾ? ಇದೀಗ ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್​ ಪಾಲಿಶ್​ ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್ ಪಾಲಿಶ್ ಹೆಸರು ‘ಅಜೇಚರ್'(Ajechar). ಈ ದುಬಾರಿ ಬೆಲೆಯ ನೇಲ್ ಪಾಲಿಶ್ ಅನ್ನು ಲಾಸ್ ಎಂಜೆಲಿಸ್(Laas Enjalis) ನ ಡಿಸೈನರ್ ಎಜೆಟ್ಯೂರ್ ಪೊಗೊಸಿಯನ್ ಅವರು ತಯಾರಿಸಿದ್ದಾರೆ. ಅವರು ಪ್ರಪಂಚದಾದ್ಯಂತ ತಮ್ಮ ಐಷಾರಾಮಿ ವಸ್ತುಗಳಿಗೆ ಸಾಕಷ್ಟು ಜನಪ್ರಿಯರಾಗಿದ್ದಾರೆ.

ಅಷ್ಟಕ್ಕೂ ಅದರಲ್ಲಿ ಕೋಟಿ ಕೊಟ್ಟು ಖರೀದಿಸುವಂತಹ ವಿಶೇಷತೆ ಏನಿದೇ ಅಂತಾ ಅನಿಸಬಹುದು. ದೂರದಿಂದ ನೋಡಿದಾಗ ಈ ನೇಲ್ ಪಾಲಿಶ್ ಸಾಮಾನ್ಯವಾಗಿ ಕಾಣಿಸಬಹುದಾದರೂ ಕೂಡ ಇದರ ತಯಾರಿಕೆಯಲ್ಲಿ ಸುಮಾರು 1,63,66,000 ರೂ. ಬೆಲೆಯ 267-ಕ್ಯಾರೆಟ್ ಕಪ್ಪು ಡೈಮಂಡ್ ಬಳಸಲಾಗುತ್ತದೆ. ಈ ಒಂದು ನೇಲ್​​ ಪಾಲಿಶ್​​ ಖರೀದಿಸುವ ಹಣದಲ್ಲಿ ನೀವು 3 Mercedes-Benz ಕಾರು ಖರೀದಿಸಬಹುದು.

ಅಜೇಚರ್ ನೈಲ್ ಪಾಲಿಶ್ ಬೆಲೆ ಬರೋಬ್ಬರಿ 2,50000 ಡಾಲರ್ ಗಳು. ಅಂದರೆ ಭಾರತದಲ್ಲಿ ಸುಮಾರು 1 ಕೋಟಿ 90 ಲಕ್ಷ ರೂ. ಇನ್ನುಈ ನೈಲ್​ ಪಾಲಿಶ್​ ಜಗತ್ತಿನಲ್ಲಿ ‘ಬ್ಲಾಕ್​ ಡೈಮಂಡ್​ ಕಿಂಗ್​‘ ಎಂದೂ ಖ್ಯಾತಿಯನ್ನೂ ಪಡೆದಿದೆ. ವರದಿಗಳ ಪ್ರಕಾರ, ಇಲ್ಲಿಯವರೆಗೆ 25 ಜನರು ಬ್ಲ್ಯಾಕ್ ಡೈಮಂಡ್ ನೇಲ್ ಪಾಲಿಷ್ ಅನ್ನು ಖರೀದಿಸಿದ್ದಾರೆ.


Share with

Leave a Reply

Your email address will not be published. Required fields are marked *