
ಮುಡಾ ಕೇಸ್ ಸದ್ದು ಮಾಡಿದ್ದು ಆಯಿತು, ಇದೀಗ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಚಿವ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಹೌದು, ಪ್ರಿಯಾಂಕ ಖರ್ಗೆ ಅವರು ಬುದ್ಧ ವಿಹಾರ ಕಟ್ಟಲು ಸಿದ್ದಾರ್ಥ ವಿಹಾರ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಅದೊಂದು ಧಾರ್ಮಿಕ ಸಂಸ್ಥೆ. ಆದರೆ, ಇದನ್ನು ಯಾವುದೋ ವ್ಯವಹಾರ ಮಾಡುವುದಕ್ಕೆ, ಹಾಗೂ ಕಾರ್ಖಾನೆ ಕಟ್ಟುವುದಕ್ಕೆ ಉಪಯೋಗಿಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ





