ಬೆಳ್ತಂಗಡಿ: ಮಹಿಳೆಯೋರ್ವರ ಮೊಬೈಲ್ ಫೋನ್ ಕದ್ದ ವ್ಯಕ್ತಿಯೋರ್ವ ಅದೇ ಮೊಬೈಲ್ ಫೋನಿನಿಂದ ಫೋನ್ ಪೇ ಮೂಲಕ ಹಣ ಲಪಟಾಯಿಸಿದ ಘಟನೆ ಕುರಿತು ಕೇಸು ದಾಖಲಾಗಿದೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಭಿದಾಬಾನು (35ವ)ರವರು ನ.9ರಂದು ಬೆಳಿಗ್ಗೆ ಮನೆಯಲ್ಲಿ ಇರದಿದ್ದ ವೇಳೆ ಅವರ ಪರಿಚಯದ ಸಿದ್ದಿಕ್ ಎಂಬಾತ ಮೊಬೈಲ್ ಫೋನ್ ಕಳವು ಮಾಡಿದ್ದಾನೆ. ಬಳಿಕ ಅದೇ ಮೊಬೈಲ್‌ನಲ್ಲಿ ಫೋನ್ ಪೇ ಮುಖಾಂತರ ಅಬಿದಾಬಾನು ಅವರ ಖಾತೆಯಲ್ಲಿದ್ದ 64 ಸಾವಿರ ರೂ ಹಣದ ಪೈಕಿ 34 ಸಾವಿರ ರೂಪಾಯಿ ಹಣವನ್ನು ಜಾಫರ್ ಎಂಬಾತನಿಗೆ, 25 ಸಾವಿರ ರೂ ಹಣವನ್ನು ಮಹಮ್ಮದ್ ಎಂಬಾತನಿಗೆ ಹಾಗೂ 2 ಸಾವಿರ ರೂ ಹಣವನ್ನು ಸಿರಾಜ್ ಎಂಬಾತನಿಗೆ ವರ್ಗಾವಣೆ ಮಾಡಿದ್ದಾನೆ. ಮೊಬೈಲ್ ಫೋನ್ ಕದ್ದು ಗೂಗಲ್ ಪೇ ಮೂಲಕ ಹಣ ಲಪಟಾಯಿಸಿದವನು ಅಬಿದಾಬಾನು ಅವರ ಗಂಡನ ಸ್ನೇಹಿತರಾಗಿರುವುದರಿಂದ ಮೊಬೈಲ್ ಫೋನ್ ಮತ್ತು ಹಣವನ್ನು ವಾಪಸು ನೀಡಬಹುದೆಂದು ಇದುವರೆಗೆ ಕಾದಿದ್ದು ಈವರೆಗೆ ವಾಪಸ್ ನೀಡದಿರುವ ಹಿನ್ನೆಲೆಯಲ್ಲಿ ನ.23ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಠಾಣೆಯಲ್ಲಿ ಅ.ಕ್ರ. ನಂ 116/2023ರಂತೆ ಕಲಂ 380 ಮತ್ತು 411ಐಪಿಸಿಯಡಿ ಪ್ರಕರಣ ದಾಖಲಿಸಲಾಗಿದೆ.