ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ..! ಆಸ್ಪತ್ರೆಗೆ ದಾಖಲು

Share with

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಸಮೀಪ ಮುಖ್ಯ ರಸ್ತೆಯಲ್ಲಿ ಎರಡು ಕಾರುಗಳು ಮುಖಾಮುಖಿ ಢಿಕ್ಕಿಯಾಗಿ ಎರಡೂ ಕಾರುಗಳ ಪ್ರಯಾಣಿಕರು ಸಣ್ಣಪುಟ್ಟ ಗಾಯಗೊಂಡು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ಅ.26ರ ರವಿವಾರ ಸಂಭವಿಸಿದೆ.

ಕೇರಳದ ಬದಿಯಡ್ಕ ಕಡೆಯಿಂದ ಸಕಲೇಶಪುರಕ್ಕೆ ಹೋಗುತ್ತಿದ್ದ ವ್ಯಾಗನರ್‌ ಕಾರು ಹಾಗೂ ಸುಬ್ರಹ್ಮಣ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಚಿತ್ರದುರ್ಗ ಮೂಲದವರ ಕಾರಿನ ನಡುವೆ ಢಿಕ್ಕಿ ಸಂಭವಿಸಿತು.

ಬದಿಯಡ್ಕ ಮೂಲದ ಕಾರಿನಲ್ಲಿದ್ದ ಮಗು ಹಾಗೂ ಮಹಿಳೆ ಸೇರಿ ನಾಲ್ಕು ಮಂದಿಗೆ ಹಾಗೂ ಚಿತ್ರದುರ್ಗ ಮೂಲದ ಕಾರಿನ ಓರ್ವ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.


Share with

Leave a Reply

Your email address will not be published. Required fields are marked *