ಮಣ್ಣಂಗುಳಿ ಮೈದಾನ ರಸ್ತೆ, ಅಂಗನವಾಡಿ ಬಳಿ ತ್ಯಾಜ್ಯಗಳ ರಾಶಿ..! ಆರೋಗ್ಯ ಸಮಸ್ಯೆಯ ಭೀತಿ

Share with

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ವ್ಯಾಪ್ತಿಯ ಮಣ್ಣಂಗುಳಿ ಮೈದಾನ ರಸ್ತೆ ಹಾಗೂ ಪರಿಸರದ ಅಂಗನವಾಡಿ ಬಳಿಯಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ರಾಶಿ ಸಂಗ್ರಹ ಗೊಂಡಿದ್ದು, ದುರ್ವಾಸನೆ ಬೀರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿ ಕರು ಹಾಗೂ ಮಕ್ಕಳು ಸಮಸ್ಯೆ ಅನುಭವಿಸು ತ್ತಿರುವುದಾಗಿ ದೂರಲಾಗಿದೆ. ಕಳೆದ ಹಲವಾರು ತಿಂಗಳುಗಳಿಂದ ಮಣ್ಣಂಗುಳಿ ಮೈದಾನ ಪರಿಸರದ ವಿವಿಧ ರಸ್ತೆಗಳಲ್ಲಿ ಹಾಗೂ ಅಂಗನ ವಾಡಿ ಸಮೀಪದಲ್ಲೇ ಭಾರೀ ಪ್ರಮಾಣದ ತ್ಯಾಜ್ಯವಿದ್ದರೂ ತೆರವು ಗೊಳಿಸಲು ಕ್ರಮಕೈಗೊಳ್ಳದಿರುವು ದರಿಂದ ಮೂಗಿಗೆ ಕೈ ಹಿಡಿದು ತೆರಳುವ ಪರಿಸ್ಥಿತಿ ಉಂಟಾಗಿರುವು ದಾಗಿ ಪರಿಸರ ನಿವಾಸಿಗಳು ದೂರಿದ್ದಾರೆ. ಅಲ್ಲದೆ ತ್ಯಾಜ್ಯದಿಂದ ಅಂಗನವಾಡಿಯ ಮಕ್ಕಳಿಗೆ ಆರೋಗ್ಯ ಸಮಸ್ಯೆ ಉಂಟಾಗುವ ಭೀತಿ ಹೆತ್ತವರನ್ನು ಕಾಡುತ್ತಿದೆ. ರಾತ್ರಿ ಹೊತ್ತಲ್ಲಿ ವಿವಿಧ ಪ್ರದೇಶಗಳಿಂದ

ತ್ಯಾಜ್ಯವನ್ನು ತಂದು ಉಪೇಕ್ಷಿಸುವುದಾಗಿ ಹೇಳಲಾ ಗುತ್ತಿದೆ. ಅಲ್ಲದೆ ಇಲ್ಲಿಯೇ ತ್ಯಾಜ್ಯ ವನ್ನು ಉರಿಸಲಾಗುತ್ತಿದೆ. ಆದರೆ ತ್ಯಾಜ್ಯವನ್ನು ತೆರವುಗೊಳಿಸಲು ಪಂಚಾಯತ್ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಈ ಬಾರಿ ಪಂಚಾಯತ್ ಬಜೆಟ್‌ನಲ್ಲಿ ತ್ಯಾಜ್ಯ ನಿರ್ಮೂಲನೆಗೆ ಯೋಜನೆಯನ್ನು ಹಾಕಲಾಗಿದ್ದು, ಇದನ್ನು ಕೂಡಲೇ ಕಾರ್ಯರೂಪಕ್ಕೆ ತರಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಪಂಚಾಯತ್ ವ್ಯಾಪ್ತಿಯ ಒಳ ರಸ್ತೆಯಲ್ಲೂ ತ್ಯಾಜ್ಯ ಕಂಡುಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತ್ಯಾಜ್ಯವನ್ನು ಉಪೇಕ್ಷಿಸುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮಕ್ಕೆ ಮುಂದಾಗಬೇಕು, ತ್ಯಾಜ್ಯವನ್ನು ತೆರವುಗೊಳಿಸಿ ಶುಚೀಕರಣ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *