ದರ್ಶನ್ ಸಲ್ಲಿಸಿದ ಅರ್ಜಿ ವಿಚಾರಣೆ ಮುಕ್ತಾಯ; ಆದೇಶ ಕಾಯ್ದಿರಿಸಿದ ಕೋರ್ಟ್

Share with

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಸಲ್ಲಿಕೆಯಾದ ಅ ರ್ಜಿಯ ವಿಚಾರಣೆ 64ನೇ ಸೆಷನ್ಸ್ ಕೋರ್ಟಿನಲ್ಲಿ ಬುಧವಾರ (ಸೆ.3) ನಡೆದಿದೆ.

ಇತ್ತೀಚೆಗೆ ಸುಪ್ರೀಂ ತೀರ್ಪಿನ ಬಳಿಕ ದರ್ಶನ್ ಹಾಗೂ ಇತರೆ ಆ ರೋಪಿಗಳನ್ನು ಬಳ್ಳಾರಿ ಜೈಲಿಗೆ ಜೈಲಿಗೆ ಹಾಕುವುದರ ಕುರಿತು ಪರ ಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸ ಲ್ಲಿಸಿದ್ದರು. ಇದರ ಜತೆಗೆ ಕೆಲವೊಂದು ಸವಲತ್ತುಗಳನ್ನು ಜೈಲಿನಲ್ಲಿ ದರ್ಶನ್ ಅವರಿಗೆ ನೀಡಬೇಕೆಂದು ಅರ್ಜಿ ಸಲ್ಲಿಕೆಯಾಗಿತ್ತು. ಎರಡು ದಿಂಬು, ಎರಡು ಬೆಡ್ ಶೀಟ್, ದಟ್ಟ ಹಾಗೂ ಹೆಚ್ಚುವರಿ ಬಟ್ಟೆಗೆ ಅ ರ್ಜಿ ಸಲ್ಲಿಸಿದ್ದರು.

ಮಂಗಳವಾರದ ಬಳಿಕ, ಬುಧವಾರವೂ ವಕೀಲರು ದರ್ಶನ್ ಪರ ವಾದಿಸಿದ್ದಾರೆ. ದರ್ಶನ್ ಪರ ವಕೀಲ ಸುನೀಲ್‌ ಹಲವು ವಿಚಾರಗಳ ನ್ನು ಮುಂದಿಟ್ಟಿದ್ದಾರೆ.

ಜೈಲಾಧಿಕಾರಿಗಳಿಗೆ ವಿಚಾರಣಾಧಿನಾ ಕೈದಿಗಳ ವರ್ಗಾವಣೆ ಕೋರ ಲು ಅನುಮತಿಯೇ ಇಲ್ಲ ಎಂದು ಸುನೀಲ್ ವಾದಿಸಿದ್ದಾರೆ.

2024 ರಲ್ಲಿ ದರ್ಶನ್ ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲು ಅಂದು ಬೆಳಕಿಗೆ ಬಂದ ರಾಜತಿಥ್ಯ ಕಾರಣವಾಗಿತ್ತು. ರೌಡಿಶೀಟರ್ ಗಳ ಜೊತೆ ಸೇರಿದ್ದರು ಅಂತ ಶಿಫ್ಟ್ ಮಾಡಿದ್ದರು. ಈ ಸಮಯದಲ್ಲಿ ಕೇವಲ ಆರೋಪಿಗಳ ಮೇಲೆ ಮಾತ್ರ ಕೇಸ್ ಆಗಿಲ್ಲ. ಜೈಲಾಧಿಕಾರಿಗ ಳ ಮೇಲೆಯೂ ಕೇಸ್ ಆಗಿತ್ತು. ಆದರೆ ಅದನ್ನು ಮುಚ್ಚಿಟ್ಟಿದ್ದಾರೆ ಎಂದಿದ್ದಾರೆ.

23.8.2024 ರಲ್ಲಿ ಸಿಸಿಬಿ ರೇಡ್ ಮಾಡಿತ್ತು. ಆಗ ಜೈಲಿನ ಅಧಿಕಾರ ಗಳೇ ಕೆಲ ವಸ್ತುಗಳನ್ನು ಜೈಲಿನ ಒಳಗೆ ಸಪ್ಪೆ ಮಾಡಿದ್ದರು. ಈ ಆ ರೋಪದಲ್ಲಿ ಕೆಲ ಜೈಲಾಧಿಕಾರಿಗಳು ಅಮಾನತು ಆಗಿದ್ದಾರೆ. ದರ್ಶ ನ್ ಜೊತೆ ಕಾಣಿಸಿಕೊಂಡವರ ಕೇಸ್ ಗೆ ಹೈಕೋರ್ಟ್ ಸ್ಟೇ ಕೊಟ್ಟಿದೆ ಎಂದಿದ್ದಾರೆ.

ಸೆಂಟ್ರಲ್ ಜೈಲಲ್ಲಿ ಸಾವಿರಾರು ಕೈದಿಗಳಿದ್ದಾರೆ. ಅವರನ್ನು ವರ್ಗಾವ ಣೆ ಕೋರಿಲ್ಲ. ಜೈಲು ಅಥಾರಿಟಿ ಕರೆಕ್ಟ್ ಇದ್ರೆ ಈ ಪ್ಲಾಸ್ಲಂ ಯಾಕೆ? ಯಾರ ಮೇಲೂ ವರ್ಗಾವಣೆ ಕೋರದ ಇವು ದರ್ಶನ್ ಮೇಲೆ ಮಾತ್ರ ಯಾಕೆ..? ಎಂದು ದರ್ಶನ್ ಲಾಯರ್ ಸುನೀಲ್ ಪ್ರ ಶ್ನಿಸಿದ್ದಾರೆ.

ಬೇರೆ ಜೈಲಿನವರು ದರ್ಶನ್ ನಮಗೆ ಬೇಡ ಎನ್ನುತ್ತಿದ್ದಾರೆ. ಈ ಹಿಂದೆ ಪೊಲೀಸ್ ಕಮಿಷನರ್ ಆಗಿದ್ದ ದಯಾನಂದ್ ಅವರೇ ಈಗ ಕಾರಾಗೃಹ ಇಲಾಖೆ ಡಿಜಿ ಆಗಿದ್ದಾರೆ. ಅವರ ಸೂಚನೆ ಮೇರೆಗೆ ಶಿಫ್ಟ್ ಗರ ಅರ್ಜಿ ಹಾಕಲಾಗಿದೆ. ಜೈಲು ಅಧಿಕಾರಿಗಳಿಗೆ ಅವಾರ್ಡ್ ಕೊಡಿಸ್ತೀನಿ ಅಂತ ಹೇಳಿ ಈ ಅರ್ಜಿ ಹಾಕಿದ್ದಾರೆ ಎಂದಿದ್ದಾರೆ. ಟ್ರಯ ಲ್ ಮಾಡುವಾಗ ವಿಡಿಯೋ ಕಾನ್ವರೆನ್ಸ್ ಮೂಲಕ ಹಾಜರು ಪಡಿಸ ಲು ಆಗಲ್ಲ ಎಂದು ಅವರು ಹೇಳಿದ್ದಾರೆ.

ಎರಡೂ ವಾದವನ್ನು ಆಲಿಸಿದ ಬಳಿಕ ಕೋರ್ಟ್ ಆದೇಶವನ್ನು ಸೆ.9 ಕ್ಕೆ ಕಾಯ್ದಿರಿಸಿದೆ.


Share with

Leave a Reply

Your email address will not be published. Required fields are marked *