9 ತಿಂಗಳಿನಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಸೊಸೆಗೆ ಅತ್ತೆ ಕಿಡ್ನಿ ದಾನ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ಯಾದಗಿರಿಯ ಸುರಪುರ ತಾಲೂಕಿನ ಮಾಳೂರು ಗ್ರಾಮದ ನಿವಾಸಿ ಶಾಂತಾಬಾಯಿ, ಮಗ ಪ್ರಕಾಶನ ಪತ್ನಿ ಬಸಮ್ಮಗೆ ತಮ್ಮ ಒಂದು ಕಿಡ್ನಿ ನೀಡಿದ್ದಾರೆ.

ಸೊಸೆ ಬಸಮ್ಮ ಎರಡೂ ಕಿಡ್ನಿ ಫೇಲ್ ಆಗಿ ಕಳೆದ 9 ತಿಂಗಳಿಂದ ಬಳಲುತ್ತಿದ್ದರು. ಬಸಮ್ಮಗೆ ಯಾರೂ ಕೂಡ ಕಿಡ್ನಿ ಕೊಡಲು ಮುಂದಾಗಿರಲಿಲ್ಲ. ಹೀಗಾಗಿ ಅತ್ತೆ ಶಾಂತಾಬಾಯಿ ತನ್ನ ಒಂದು ಕಿಡ್ನಿ ಕೊಟ್ಟು ಸೊಸೆಗೆ ಮರು ಜೀವ ನೀಡಿದ್ದಾರೆ.




