ರಸ್ತೆ ಬದಿಯಲ್ಲಿ ಭಾರೀ ಪ್ರಮಾಣದ ಮಾಲಿನ್ಯ ರಾಶಿ: ದುರ್ವಾಸನೆಯಿಂದ  ಸಂಚಾರ ಸಮಸ್ಯೆ

Share with


ಉಪ್ಪಳ:  ರಸ್ತೆ ಬದಿಯಲ್ಲಿ ಮಾಲಿನ್ಯ  ರಾಶಿ ಕೊಳೆತು ದುರ್ವಾಸನೆಯಿಂದ ಸಾರ್ವಜನಿಕರ ಸಂಚಾರ ಸಹಿತ ರೋಗದ ಆತಂಕ ಉಂಟಾಗಿದೆ.  ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಸೋಂಕಾಲು-ನಯಬಜಾರ್ ಲೊಕೋಪಯೋಗಿ ಇಲಾಖೆಗೆ ಸೇರಿದ  ರಸ್ತೆಯ ಕುದುಕೋಟಿ ಎಂಬಲ್ಲಿ ಭಾರೀ ಪ್ರಮಾಣದ ತ್ಯಾಜ್ಯ ರಾಶಿ ಸ್ಥಳೀಯ ನಿವಾಸಿಗಳ ಸಹಿತ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.  ಹಲವಾರು ತಿಂಗಳುಗಳಿoದ ನಿರಂತರವಾಗಿ ಭಾರೀ ಪ್ರಮಾಣದ ತ್ಯಾಜ್ಯವನ್ನು ತಂದು ಉಪೇಕ್ಷಿಸಲಾಗುತ್ತಿದ್ದರೂ ಈ ಬಗ್ಗೆ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆಹಾರ ಸಹಿತ ಮನೆನಗಳಲ್ಲಿ  ಉಪಯೋಗ ಶೂನ್ಯಗೊಂಡ ವಿವಿಧ ತ್ಯಾಜ್ಯಗಳು ಕಂಡುಬರುತ್ತಿದೆ. ತ್ಯಾಜ್ಯ ಚರಂಡಿಯಲ್ಲಿ ತುಂಬಿ ರಸ್ತೆಗೆ ತಲುಪಿದೆ. ಮಳೆನೀರು ತ್ಯಾಜ್ಯ ಮಿಶ್ರಣಗೊಂಡು ರಸ್ತೆಯಲ್ಲಿಯೇ ಹರಿಯುತ್ತಿರುವುದು  ಪಾದಚಾರಿಗಳು ಇದನ್ನೇ ತುಳಿದು ತೆರಳಬೇಕಿದೆ. ಈ ಪರಿಸರದಲ್ಲಿರುವ ಕುಟುಂಬ ದುರ್ವಾಸನೆಯನ್ನು ಸಹಿಸಬೇಕಾದ ವಸ್ಥೆಯಾಗಿದೆ. ಈ ರಸ್ತೆಯಲ್ಲಿ  ಸೋಂಕಾಲು, ಪ್ರತಾಪನಗರ, ಅಂಬಾರು, ಚೆರುಗೋಳಿ, ನಯಬಜಾರ್ ಸಹಿತ ಹಲವಾರು ಪ್ರದೇಶಗಳಿಂದ  ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತಿದೆ. ತ್ಯಾಜ್ಯಗಳನ್ನು ತೆರವುಗೊಳೀಸಿ, ಇಲ್ಲಿ ಸಿಸಿ ಕ್ಯಾಮರವನ್ನು ಅಳವಡಿಸಿ ತ್ಯಾಜ್ಯ ಎಸೆಯುವವರ ವಿರುದ್ದ ಕ್ರಮಕ್ಕೆ ಸಂಬAಧಪಟ್ಟ ಜನಪ್ರತಿನಿಧಿ ಹಾಗೂ ಪಂಚಾಯತ್, ಲೊಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಬೇಕೆoದು ಸಾರ್ವಜನಿಕರು ಆಗ್ರಹಿಸಿದ್ದಾರೆ. [


Share with

Leave a Reply

Your email address will not be published. Required fields are marked *