
ಹಿಮಾಚಲ ಪ್ರದೇಶದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಅಪಾರ ಹಾನಿ ಸಂಭವಿಸಿದೆ.

ರಾಜ್ಯದ ಕುಲ್ಲು ಜಿಲ್ಲೆಯ ಆಘಾತಕಾರಿ ಫೋಟೋಗಳು ವೈರಲ್ ಆಗಿವೆ. ಮಳೆಯಿಂದಾಗಿ ಇಲ್ಲಿ ಅಪಾರ ಹಾನಿಯಾಗಿದ್ದು, ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯುತ್ತಿವೆ. ಜೊತೆಗೆ ಹಿಮಮಳೆಯಾಗುತ್ತಿದ್ದು, ವಾಹನಗಳು ಹಿಮದಲ್ಲಿ ಹೂತು ಹೋಗಿವೆ.
ಇದೀಗ ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ.




