
ಸಕಲೇಶಪುರ: ಕಳೆದ 4-5 ದಿನಗಳಿಂದ ಭೀಕರ ಮಳೆಯಾಗುತ್ತಿದ್ದು ಕೆಲವು ಕಡೆ ಭೂಕುಸಿತ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಅತಿವೃಷ್ಟಿ ಎಮರ್ಜೆನ್ಸಿ ಗೆ 24×7 ಪೊಲೀಸ್ ಇಲಾಖೆ ಸಜ್ಜಾಗುವ ನಿಟ್ಟಿನಲ್ಲಿ ರೂಪು ರೇಷೆ ತಯಾರು ಮಾಡಲಾಯಿತು.
ಇವತ್ತು ಬೆಳ್ಳಂಬೆಳಿಗ್ಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಜಗದೀಶ್ ರವರು ತನ್ನ ಅಧೀನದಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ತುರ್ತುಸಭೆ ನಡೆಸಿದರು.
ಪ್ರಕೃತಿ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಮಾಡಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.





