ಚಿಕ್ಕಮಗಳೂರು: ಕಳೆದ ಐದು ಆರು ದಿನಗಳಿಂದ ಬಯಲುಸೀಮೆ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.
ಅಜ್ಜಂಪುರ ತಾಲೂಕಿನ ತಮಟದಹಳ್ಳಿ, ಗಡಿಹಳ್ಳಿ, ಗೌರಾಪುರ, ಹಬ್ಬಿನಹೊಳಲು ಗ್ರಾಮಗಳಲ್ಲಿ ಭಾರೀ ಮಳೆಯಾಗಿದ್ದು ಹಳ್ಳಗಳು ಭರ್ತಿಯಾಗಿ ರಸ್ತೆಯಲ್ಲಿ ಒಂದೂವರೆ – ಎರಡು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. ರಸ್ತೆಗಳ ಮೇಲೆ ವಾಹನ ಚಲಿಸಲು ಸವಾರರು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿದ್ದು ಜನರು ಜೀವ ಭಯದಲ್ಲಿ ಕೈ ಕೈ ಹಿಡಿದು ರಸ್ತೆ ದಾಟಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳು ನೀರುಪಾಲಾಗಿದೆ.