ಸೆಕೆ..ಸೆಕೆ..ಕರಾವಳಿಯಲ್ಲಿ ಭಾರೀ ಸೆಕೆ..!ಗರಿಷ್ಠ ಉಷ್ಣಾಂಶ ದಾಖಲು.!!

Share with

ಉಡುಪಿ: ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂಬ ಹವಾಮಾನ ಇಲಾಖೆಯ ವರದಿಯಿ ದ್ದರೂ ಅಂತಹ ಯಾವುದೇ ಲಕ್ಷಣ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೂ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಬೆಳಗ್ಗೆಯಿಂದಲೇ 30ರಿಂದ 32 ಡಿಗ್ರಿಯಷ್ಟು ಉಷ್ಣಾಂಶವಿದ್ದು, ಮಧ್ಯಾಹ್ನದ ಅನಂತರ ಸುಮಾರು 34 ಡಿಗ್ರಿಯಷ್ಟು ದಾಖಲಾಗಿತ್ತು. ಆದರೆ 40 ಡಿಗ್ರಿಯಷ್ಟು ಭಾಸವಾಯಿತು. ಜಿಲ್ಲೆಯ ವಿವಿಧ ಭಾಗಗಳಲ್ಲಿ 2 ದಿನದ ಹಿಂದೆ ತುಸು ಮಳೆ ಸುರಿದಿತ್ತಾದರೂ ಶುಕ್ರವಾರ ಯಾವುದೇ ಲಕ್ಷಣ ಕಂಡುಬರಲಿಲ್ಲ. ಕೆಲವು ದಿನಗಳ ಹಿಂದೆ ಬೆಳಗ್ಗೆಯ ಹೊತ್ತು ಮೋಡದ ವಾತಾವರಣ ಇತ್ತಾದರೂ ಈಗ ಸಂಪೂರ್ಣ ವಿರುದ್ಧವಾಗಿದೆ.

ಮುಖ್ಯವಾಗಿ ಸಮುದ್ರ ತೀರ ದಲ್ಲಿ ಪ್ರವಾಸಿಗರ ಸಂಖ್ಯೆಯೂ ಇಳಿಮುಖ ವಾಗಿತ್ತು. ಹೊರಭಾಗದಿಂದ ಆಗಮಿ ಸಿದ ಕೆಲವು ಮಂದಿ ಪ್ರವಾಸಿಗರು ಸಮುದ್ರ ಸ್ನಾನ ಮಾಡಿ ವಾಪಾಸಾದರು. ಶುಕ್ರವಾರವಾದರೂ ದೇವಸ್ಥಾನಗಳಲ್ಲಿ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಮಳೆ ಸುರಿಯುವ ಸಾಧ್ಯತೆ ಇದೆಯಾದರೂ ಉಷ್ಣಾಂಶದ ಪ್ರಮಾಣವೂ ಹೆಚ್ಚಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


Share with

Leave a Reply

Your email address will not be published. Required fields are marked *