ಸ್ನೇಹಿತನಿಗೆ ಸಹಾಯ ಮಾಡಿ ತಾನೇ ಗೆದ್ದ.. ಈತನೇ ನೋಡಿ ಹೊಸ ಆಧಾರ್ ಮ್ಯಾಸ್ಕಾಟ್ ನ ಸೃಷ್ಟಿಕರ್ತ

Share with

ತ್ರಿಶೂರ್: ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಯೋಜಿಸಿದ್ದ ರಾಷ್ಟ್ರೀಯ ಮ್ಯಾಸ್ಕಾಟ್ ವಿನ್ಯಾಸ ಸ್ಪರ್ಧೆಯಲ್ಲಿ ತ್ರಿಶೂರ್‌ನ 36 ವರ್ಷದ ಅರುಣ್ ಗೋಕುಲ್ (Arun Gokul) ಗೆಲುವು ಸಾಧಿಸಿದ್ದಾರೆ. ದೇಶಾದ್ಯಂತ 875 ಜನ ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಅರುಣ್ ಮಾಡಿದ ವಿನ್ಯಾಸವನ್ನು ಈಗ ಆಧಾರ್ ನ ಅಧಿಕೃತ ಮ್ಯಾಸ್ಕಾಟ್ ಆಗಿ ಸ್ವೀಕರಿಸಲಾಗಿದೆ. ಇದಕ್ಕೆ ಉದಯ್ ಎಂದು ಹೆಸರಿಸಲಾಗಿದೆ.

ಅರುಣ್ ಕೊಚ್ಚಿಯಲ್ಲಿ ಲಾಜಿಸ್ಟಿಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಬಿಟೆಕ್ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವೀಧರ. ಅರುಣ್ ಸ್ಪರ್ಧೆಯ ಬಗ್ಗೆ ತಿಳಿದುಕೊಳ್ಳುವ ಹೊತ್ತಿಗೆ ಪ್ರವೇಶವನ್ನು ಕಳುಹಿಸಲು ಕೆಲವೇ ಗಂಟೆಗಳ ಗಡುವು ಮಾತ್ರ ಇತ್ತು.

“ನನ್ನ ಸ್ನೇಹಿತ ನನಗೆ ಕರೆ ಮಾಡಿ, ಸ್ಪರ್ಧೆಗಾಗಿ ಆತ ರಚಿಸಿದ ಡಿಸೈನ್ ಮರುಗಾತ್ರಗೊಳಿಸಲು ಸಹಾಯ ಕೇಳಿದರು. ವಿವರಗಳನ್ನು ಹಂಚಿಕೊಳ್ಳುವಾಗ, ನಾನು ಸಹ ಭಾಗವಹಿಸುವಂತೆ ಸೂಚಿಸಿದನು. ಆದರೆ ಗಡುವು ಅಂದೇ ಮಧ್ಯರಾತ್ರಿಯಾಗಿತ್ತು” ಎಂದು ನೆನಪಿಸಿಕೊಂಡರು.

“ಇನ್ನು ಎರಡು ಅಥವಾ ಮೂರು ಗಂಟೆಗಳು ಮಾತ್ರ ಉಳಿದಿದ್ದವು. ಅಲ್ಲದೆ, ನಾನು ವೃತ್ತಿಪರ ಕಲಾವಿದನಲ್ಲ. ಉತ್ಸಾಹಿಯೂ ಅಲ್ಲ. ಆದರೆ ನಾನು ಫ್ರೀ ಇದ್ದೆ ಹೀಗಾಗಿ ಕೊನೆಯ ನಿಮಿಷವಾದರೂ ಪರವಾಗಿಲ್ಲ ಎಂದುಕೊಂಡು ಪ್ರಯತ್ನಿಸಲು ಯೋಚಿಸಿದೆ” ಎಂದು ಅವರು ಹೇಳಿದರು.

ವೃತ್ತಿಪರ ವಿನ್ಯಾಸ ಸಾಫ್ಟ್‌ವೇರ್‌ಗೆ ಪ್ರವೇಶವಿಲ್ಲದ ಕಾರಣ, ಅರುಣ್ ತನ್ನ ಕಂಪ್ಯೂಟರ್‌ನಲ್ಲಿ ಡೀಫಾಲ್ಟ್ ಪೇಂಟ್ ಟೂಲ್ ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್ ಕ್ಯಾನ್ವಾ ಬಳಸಿ ಡಿಸೈನ್ ಮಾಡಿದರು. ಮೂರು ಗಂಟೆಗಳ ಕೆಲಸದ ನಂತರ ಅವರ ಡಿಸೈನ್ ಸಿದ್ದವಾಗಿತ್ತು. ಆದರೆ ಸ್ನೇಹಿತನ ಡಿಸೈನ್ ತನಗಿಂತ ಚೆನ್ನಾಗಿತ್ತು ಎನ್ನುತ್ತಾರೆ ಅರುಣ್.

“ಅವರ ವಿನ್ಯಾಸವು ವಿಸ್ತಾರವಾಗಿತ್ತು, ಮೇಕ್ ಇನ್ ಇಂಡಿಯಾ ಕಲಾಕೃತಿಯ ಮಾದರಿಯಲ್ಲಿ. ನನ್ನದು ತುಂಬಾ ಸರಳವಾಗಿತ್ತು. ಆದರೂ, ಅದು ಸ್ಪರ್ಧೆಯ ಮಾರ್ಗಸೂಚಿಗಳನ್ನು ಪೂರೈಸುತ್ತದೆ ಎಂದು ನಾನು ಖಚಿತಪಡಿಸಿಕೊಂಡೆ. ಸಂತೋಷದ ಮುಖ, ಆಕ್ರಮಣಕಾರಿಯಲ್ಲದ, ಎಲ್ಲಾ ವಯೋಮಾನದವರಿಗೂ ಆಕರ್ಷಕವಾಗಿತ್ತು. ಗಡುವು ಮುಗಿಯುವ ಮೊದಲು ಅದನ್ನು ಕಳುಹಿಸಿದೆ” ಎನ್ನುವ ಅರುಣ್ ಏ‌ರ್ ಇಂಡಿಯಾದ ಮಹಾರಾಜ ತನ್ನ ಮ್ಯಾಸ್ಕಾಟ್ ಸ್ಪೂರ್ತಿ ಎಂದು ಹೇಳಿದರು.

ವಿಪರ್ಯಾಸ ಎಂದರೆ, ಅರುಣ್ ಅವರು ತನ್ನ ಡಿಸೈನ್ ಸೇವ್ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದರು. ಡಿಸೆಂಬರ್ 28 ರಂದು ದೆಹಲಿಯ ಯುಐಡಿಎಐ ಕಚೇರಿಯಿಂದ ಅವರಿಗೆ ಕರೆ ಬಂದಾಗ ಮಾತ್ರ ಆ ನೆನಪು ಥಟ್ಟನೆ ನೆನಪಾಯಿತು.

“800 ಕ್ಕೂ ಹೆಚ್ಚು ನಮೂದುಗಳಲ್ಲಿ ನನ್ನ ವಿನ್ಯಾಸವನ್ನು ಶಾರ್ಟ್‌ಸ್ಟ್ ಮಾಡಲಾಗಿದೆ ಎಂದು ಅವರು ನನಗೆ ಹೇಳಿದರು. ನನಗೆ ಅಚ್ಚರಿಯಾಗಿತ್ತು. ನಾನು ಈ ರೀತಿಯ ಯಾವುದನ್ನೂ ಊಹಿಸಿರಲಿಲ್ಲ” ಅವರು ಅರುಣ್ ಹೇಳಿದರು.


Share with

Leave a Reply

Your email address will not be published. Required fields are marked *