ಹಾಯ್ ಗೈಸ್.. ತಾಯಿ ಜೊತೆ BB ಮನೆಯಲ್ಲಿ ವ್ಲಾಗಿಂಗ್ ಸ್ಟಾರ್ಟ್ ಮಾಡಿದ ರಕ್ಷಿತಾ..

Share with

ಬೆಂಗಳೂರು: ಬಿಗ್ ಬಾಸ್ ಮನೆಗೆ ಈ ವಾರ ಸ್ಪರ್ಧಿಗಳ ಪೋಷಕರು ಬರಲಿದ್ದಾರೆ. ತನ್ನ ಮಕ್ಕಳ ಜತೆ ಪೋಷಕರು ಬೆರೆತು ಆತ್ಮೀಯ ಕ್ಷಣವನ್ನು ಕಳೆಯಲಿದ್ದಾರೆ.

ರಾಶಿಕಾ ಅವರ ತಾಯಿ ಹಾಗೂ ಸಹೋದರ ಮನೆಗೆ ಬಂದಿದ್ದು ಇಬ್ಬರು ಕೂಡ ಸ್ಪರ್ಧಿಗಳ ಸುಂದರ ಕ್ಷಣವನ್ನು ಕಳೆದಿದ್ದಾರೆ. ಇದರ ಜತೆ ಸೂರಜ್ ಅವರ ತಾಯಿ ತನ್ನ ಮಗ ಹಾಗೂ ಮನೆಯವರಿಗಾಗಿ ರುಚಿ ರುಚಿಯ ಅಡುಗೆಯನ್ನು ಮಾಡಿ ತಂದಿದ್ದಾರೆ. ಇನ್ನು ಧನುಷ್ ಅವರ ತಾಯಿ ಮಗನನ್ನು ಪ್ರೀತಿಯಿಂದ ಬಂದು ಅಪ್ಪಿಕೊಂಡಿದ್ದಾರೆ.

ಬಿಗ್ ಬಾಸ್ ಮನೆಗೆ ರಕ್ಷಿತಾ ಶೆಟ್ಟಿ ಅವರ ತಾಯಿ ಆಗಮಿಸಿದ್ದಾರೆ. ಅಮ್ಮನನ್ನು ನೋಡಿದ ಕೂಡಲೇ ರಕ್ಷಿತಾ ಓಡೋಡಿ ಬಂದು ಅಪ್ಪಿಕೊಂಡಿದ್ದಾರೆ.

ಮಗಳನ್ನು ನೋಡಿದ ಬಳಿಕ ತಾಯಿ ಮುದ್ದಾಡಿಕೊಂಡು ತಲೆಯ ಕೂದಲು ಕಟ್ಟಿದ್ದಾರೆ. ‘ ಯಾರಿಗೂ ಏನು ಹೇಳಬೇಡ,ಜಗಳ ಮಾಡಬೇಡ ಜಗಳ ಗಂಟಿ’ ಎಂದಿದ್ದಾರೆ.

ಧ್ರುವ ಅವರು ’ಬೆತ್ತ ತರಲಿಲ್ವಾ?’ ಎಂದು ಕೇಳಿದ್ದಾರೆ. ಬೆತ್ತ ತಂದಿದ್ರೆ ನಿನಗೆ ಹೊಡೆಯುತ್ತಾ ಇದ್ರು ಅಣ್ಣ ಎಂದು ಧ್ರುವಂತ್ ಗೆ ಗಿಲ್ಲಿ ಹೇಳಿದ್ದಾರೆ.

ಧ್ರುವಂತ್ ಅವರು ರಕ್ಷಿತಾ ಅವರ ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲೇ ರಕ್ಷಿತಾ ಅವರು ಬ್ಲಾಗಿಂಗ್ ಆರಂಭಿಸಿದ್ದಾರೆ. ಕ್ಯಾಮೆರಾ, ಮೀನು ಕೊಟ್ಟು ಬ್ಲಾಗಿಂಗ್ ಆರಂಭಿಸಿ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇದಕ್ಕೆ ರಕ್ಷಿತಾ ತನ್ನ ತಾಯಿಯ ಜತೆ ‘ಹಾಯ್ ಗಾಯ್ಸ್ ಹೇಗಿದ್ದೀರಿ’ ಎಂದು ಬ್ಲಾಗ್ ಆರಂಭಿಸಿದ್ದಾರೆ.


Share with

Leave a Reply

Your email address will not be published. Required fields are marked *