ಬಂಟ್ವಾಳ: ಹಿಮಾಚಲ ಪ್ರದೇಶದಲ್ಲಿ ಗುಡ್ಡ ಕುಸಿತದ ಪರಿಣಾಮ ಬಂಟ್ವಾಳದಿಂದ ತೀರ್ಥಕ್ಷೇತ್ರಗಳ ಸಂದರ್ಶನಕ್ಕೆ ತೆರಳಿರುವ ಸುಮಾರು 47 ಮಂದಿ ಪ್ರಯಾಣಿಕರು ಹೆದ್ದಾರಿ ಬ್ಲಾಕ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದು, ಎಲ್ಲರು ಸುರಕ್ಷಿತವಾಗಿ ಇದ್ದಾರೆ ಎಂದು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾ ಮನಾಲಿ ಹೆದ್ದಾರಿಯಲ್ಲಿ ದೊಡ್ಡ ಮಟ್ಟದ ಭೂ ಕುಸಿತ ಉಂಟಾಗಿದ್ದು, ಒಂದಷ್ಟು ವಾಹನಗಳು ಮಣ್ಣಿನಡಿಗೆ ಸಿಲುಕಿದೆ ಎನ್ನಲಾಗಿದ್ದು, ಆದರೆ ಬಂಟ್ವಾಳದ ಪ್ರಯಾಣಿಕರಿದ್ದ ಮೂರು ವಾಹನಗಳು ಕುಸಿತದ ಸ್ಥಳಕ್ಕಿಂತ ಬಹಳ ದೂರದಲ್ಲಿ ಇರುವ ಹಿನ್ನೆಲೆಯಲ್ಲಿ ಯಾವುದೇ ಅಪಾಯವಿಲ್ಲ.
ಸುಮಾರು 3 ಕಿ.ಮೀ.ವರೆಗೆ ವಾಹನಗಳ ಸಾಲು ನಿಂತಿದ್ದು, ಮಣ್ಣು ತೆರವು ಕಾರ್ಯ ಭರದಿಂದ ಸಾಗುತ್ತಿದೆ ಎಂದು ಪ್ರವಾಸಿಗರು ತಿಳಿಸಿದ್ದಾರೆ.
ಹೆದ್ದಾರಿಯಲ್ಲಿ ಸಾಕಷ್ಟು ಅಂಗಡಿ ಮುಂಗಟ್ಟುಗಳು ಇರುವುದರಿಂದ ಎಷ್ಟು ಹೊತ್ತು ಬ್ಲಾಕ್ ಇದ್ದರೂ ಊಟ,ತಿಂಡಿಗೆ ಯಾವುದೇ ಸಮಸ್ಯೆಯಿಲ್ಲ ಎಂದು ಮಾಹಿತಿ ನೀಡಿದ್ದಾರೆ.