ಬೆಳ್ತಂಗಡಿ: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆ ಇವರ ಜಂಟಿ ಆಶ್ರಯದಲ್ಲಿ
ಬಾಲಕ-ಬಾಲಕಿಯರ ಗುಡ್ಡ ಗಾಡು ಓಟ ಅ.21ರಂದು ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ ಉಜಿರೆಯಲ್ಲಿ ಜರುಗಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಧನರಾಜ್ ಪಿ.ಎಂ ನೆರವೇರಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರುರಾದ ಪ್ರಮೋದ್ ಕುಮಾರ್.ಬಿ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಮುಖ್ಯ ಅಬ್ಯಾಗತರಾದ ವಿನಯಚಂದ್ರ ಆಳ್ವ ಗಸ್ತು ವನಪಾಲಕ ಅರಣ್ಯ ಇಲಾಖೆ ಬೆಳಾಲು ಇವರು ಉಪಸ್ಥಿತರಿದ್ದರು. ಮಹಾವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಿತ್ ರೈ ಸ್ವಾಗತಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್.ಬಿ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ನಿವೃತ್ತ ಪ್ರಾಂಶುಪಾಲರು ಪ್ರೊ.ಎನ್ ದಿನೇಶ್ ಚೌಟ ಆಗಮಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಿದರು. ಜಿಲ್ಲಾ ಕ್ರೀಡಾ ಸಂಯೋಜಕರು ಅರುಣ್ ಡಿಸೋಜಾ, ಉಪ ಪ್ರಾಂಶುಪಾಲರಾದ ರಾಜೇಶ್, ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಎಚ್, ನವೀನ್ ಜೈನ್ ಪದವಿಪೂರ್ವ ಕಾಲೇಜ್ ಮೂಡಬಿದ್ರೆ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಉಪನ್ಯಾಸಕ ಸಂದೇಶ್ ಪೂಂಜಾ ಕಾರ್ಯಕ್ರಮ ನಿರೂಪಿಸಿದರು. ಸುನಿಲ್ ಪಿ.ಜೆ ವಂದಿಸಿದರು.
ಬಾಲಕರ ವಿಭಾಗದಲ್ಲಿ ಒಟ್ಟು 10 ಕಾಲೇಜುಗಳ 46 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಒಟ್ಟು 7 ಕಾಲೇಜುಗಳ 36 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಯಶವಂತ್ ಕೆ, ದ್ವಿತೀಯ ಸ್ಥಾನ ಚಿರೇಶ್ ಗೌಡ, ತೃತೀಯ ಸ್ಥಾನ ರಘುವೀರ ಆಳ್ವಾಸ್ ಕಾಲೇಜು ಮೂಡಬಿದ್ರೆ, ನಾಲ್ಕನೇ ಸ್ಥಾನ ಆದಿತ್ಯ ಎ ನ್.ಪೀ ಹಾಗೂ ಐದನೇ ಸ್ಥಾನ ನಿತಿನ್ ಯು.ಎಲ್ ಉಜಿರೆ ಹಾಗೂ ಶ್ರಾವಣ ಕೆ.ಪಿ ಸೈಂಟ್ ಫಿಲೋಮಿನಾ ಆರನೇ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಚಿತ್ರ ಟಿ, ದ್ವಿತೀಯ ಸ್ಥಾನ ಪೀ ಗೀತಾ ಬಿ ಆಳ್ವಾಸ್ ಕಾಲೇಜು, ತೃತೀಯ ಸ್ಥಾನ ಶ್ರದ್ದಾ ಎಸ್ ಎಸ್ ಪಿಯು ಕಾಲೇಜು ಸುಬ್ರಹ್ಮಣ್ಯ, ನಾಲ್ಕನೇ ಸ್ಥಾನ ರೀತು ಶ್ರೀ, ಐದನೇ ಸ್ಥಾನ ಪ್ರಮೀಳಾ ಎಸ್.ಜಿ, ಆರನೇ ಸ್ಥಾನ ದೀಕ್ಷಿತ ಬೆಥನಿ ಪಿಯುಸಿ ಕಾಲೇಜು ನುಜಿಬಳ್ತಿಲ ಪಡೆದು ಮೊದಲ ಆರು ಸ್ಪರ್ಧಿಗಳು ಪದಕ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ಬಾಲಕರ ವಿಭಾಗದಲ್ಲಿ ಪ್ರಥಮ ಆಳ್ವಾಸ್, ದ್ವಿತೀಯ ಎಸ್ ಡಿ ಎಂ ಕಾಲೇಜು ಉಜಿರೆ, ತೃತೀಯ ಬೆಥನಿ ಪಿಯು ಕಾಲೇಜು ನುಜಿಬಳ್ತಿಲ. ಬಾಲಕಿಯರ ವಿಭಾಗದಲ್ಲಿ ಪ್ರಥಮ ಆಳ್ವಾಸ್, ದ್ವಿತೀಯ ಬೆಥನಿ ಪಿಯು ಕಾಲೇಜು ನೂಜಿಬಳ್ತಿಲ, ತೃತೀಯ ಎಸ್ ಡಿ ಎಂ ಪಿಯು ಕಾಲೇಜು ಉಜಿರೆ.