ಮಂಗಲ್ಪಾಡಿ: ಹಿಂದೂ ಐಕ್ಯವೇದಿ ಪ್ರತಾಪನಗರ ಮಂಗಲ್ಪಾಡಿ ಇದರ ಆಶ್ರಯದಲ್ಲಿ ಕುಟುಂಬ ಸಂಘಮ ಕಾರ್ಯಕ್ರಮ [೨೦-೭-೨೦೨೪] ರಂದು ಸಂಜೆ ೫.೩೦ಕ್ಕೆ ಪ್ರತಾಪ ನಗರ ಗಣೇಶ ಮಂದಿರದಲ್ಲಿ ನಡೆಯಲಿದೆ. ಹಿಂದೂ ಐಕ್ಯವೇದಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ ಹರಿದಾಸ್ ಮತ್ತು ಜಿಲ್ಲಾದ್ಯಕ್ಷ ಎಸ್.ಪಿ ಶಾಜಿ ಭಾಗವಹಿಸುವರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪದಾಧಿಕಾರಿಗಳು ವಿನಂತಿಸಿದ್ದಾರೆ.