ಉಡುಪಿ ಜಿಲ್ಲೆಯಾದ್ಯಂತ ಹೋಳಿ ಹಬ್ಬದ ಸಂಭ್ರಮ; ಬಣ್ಣಗಳಲ್ಲಿ ಮಿಂದೆದ್ದ ಯುವಕ ಯುವತಿಯರು; ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಕುಣಿದು ಕುಪ್ಪಳಿಸಿದ ವಿದ್ಯಾರ್ಥಿ ಸಮೂಹ

Share with

ಉಡುಪಿ: ರಂಗು ರಂಗಿನ ಹಬ್ಬವೆಂದೇ ಕರೆಯಲ್ಪಡುವ ಹೋಳಿ ಹಬ್ಬವು ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತು. ಯುವಕ‌- ಯುವತಿಯರು ಬಣ್ಣದ ಹೋಕುಳಿಯನ್ನು ಕೈಯಲ್ಲಿ ಹಿಡಿದು ಒಬ್ಬರಿಗೊಬ್ಬರಿಗೆ ಬಣ್ಣಗಳನ್ನು ಎರಚುತ್ತಾ ಸಂಭ್ರಮಿಸಿದರು.

ಪರಸ್ಪರ ಬಣ್ಣಗಳನ್ನು ಹಚ್ಚಿಕೊಂಡು ಕುಣಿದು ಕುಪ್ಪಳಿಸಿದ ವಿದ್ಯಾರ್ಥಿ ಸಮೂಹ

ಮಣಿಪಾಲದಲ್ಲಿ ಯುವಕ ಯುವತಿಯರು ಪರಸ್ಪರ ಬಣ್ಣ ಎರಚಿ ಡಿಜೆ ನೃತ್ಯಕ್ಕೆ ಸ್ಟೆಪ್ ಹಾಕಿದರು. ಕಾಲೇಜು ವಿದ್ಯಾರ್ಥಿಗಳು ಬಣ್ಣಗಳಲ್ಲಿ ಮಿಂದೆದ್ದರು. ಮಣಿಪಾಲದ ಎಂಐಟಿ ಕ್ರೀಡಾಂಗಣದಲ್ಲಿ ಜಾತಿ ಭೇದ ಮರೆತು ದೇಶ ವಿದೇಶದ ನೂರಾರು ಸಂಖ್ಯೆಯ ಯುವಕ-ಯುವತಿಯರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕೈ ತುಂಬ ಬಣ್ಣ ಹಿಡಿದುಕೊಂಡು, ಬಂದವರಿಗೆಲ್ಲ ಬಣ್ಣ ಮೆತ್ತುತ್ತ, ಯುವಕ ಯುವತಿಯರೆಲ್ಲ ಕುಣಿದು ಎಂಜಾಯ್ ಮಾಡಿದ್ರು . ಮಣಿಪಾಲದ ಎಮ್ಐಟಿ ಪಕ್ಕದ ಇಡೀ ಮೈದಾನಕ್ಕೆ ಕಾಮನ ಬಿಲ್ಲಿನ ರಂಗು ಬಂದಿತ್ತು. ಜಿಲ್ಲೆಯ ವಿದ್ಯಾಗಿರಿ ಮಣಿಪಾಲದಲ್ಲಿ ಬಣ್ಣದ ಮಳೆಯೇ ಸುರಿದಿತ್ತು. ಖಾಸಗಿ ಈವೆಂಟ್ ಮ್ಯಾನೇಜ್ಮೆಂಟ್ ಆಯೋಜನೆ ಮಾಡಿದ್ದ ರಂಗ್ ಹಬ್ಬದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಬಣ್ಣಗಳನ್ನು ಹಚ್ಚಿಕೊಂಡು ಮೈ ಮರೆತು ಸಕತ್ ಕುಣಿದು ಕುಪ್ಪಳಿಸಿದರು.


Share with

Leave a Reply

Your email address will not be published. Required fields are marked *