ಅಕ್ಷಯ ಕಾಲೇಜಿನ ಇಂಟಿರೀಯರ್ ಡಿಸೈನ್ ವಿಭಾಗದ ವಿದ್ಯಾರ್ಥಿಗಳಿಗೆ ಹೋಂ ಮಾಡೆಲ್ ಸ್ಪರ್ಧೆ

Share with



ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ  ಪ್ರಥಮ ಪದವಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ” ಹೋಂ ಮಾಡೆಲ್ ಮಾಸ್ಟರ್ಸ್”    ಎಂಬ   ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.    ‘ಎಲೈಟ್  ಇಂಟಿರಿಯರ್  ಡಿಸೈನ್ ‘ ಸಂಘ     ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ  ಸಹಭಾಗಿತ್ವದಲ್ಲಿ  ಕಾರ್ಯಕ್ರಮ  ಆಯೋಜಿಸಲಾಗಿತ್ತು.     ಕಾರ್ಯಕ್ರಮವನ್ನು ಕಾಲೇಜಿನ ಆಡಳಿತಾಧಿಕಾರಿ ಯಾದ ಶ್ರೀ  ಅರ್ಪಿತ್ ಟಿ  ಎ ಉದ್ಘಾಟಿಸಿ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಾವುದೇ ರೀತಿಯ ಕಟ್ಟಡಗಳ ವಿನ್ಯಾಸದೊಂದಿಗೆ  ಆಂತರಿಕ  ವಿನ್ಯಾಸ ವು  ಕೂಡ ಬಹಳ  ಮಹತ್ವ   ಪಡೆಯುತ್ತವೆ.  ಈ  ನಿಟ್ಟಿನಲ್ಲಿ  ವಿದ್ಯಾರ್ಥಿಗಳು ತಮ್ಮ  ಸೃಜನಶೀಲತೆಯನ್ನು ಅಭಿವೃದ್ಧಿ  ಪಡಿಸಲು  ಕಾರ್ಯಾಗಾರ ಪೂರಕವಾಗಿದೆ ಎಂದರು.     ಕಾರ್ಯಕ್ರಮದ ಅಧ್ಯಕ್ಷತೆಯನ್ನು  ವಹಿಸಿದ್ದ  ಇಂಟಿರಿಯರ್  ಡಿಸೈನ್ ವಿಭಾಗದ ಮುಖ್ಯಸ್ಥ  ಶ್ರೀ  ರಕ್ಷಣ್  ಟಿ ಆರ್  , 3ಡಿ ಮಾಡೆಲ್   ವಿನ್ಯಾಸಕಾರರಿಗೆ   ವಿವಿಧ  ಆಯಾಮಗಳಲ್ಲಿ  ತಮ್ಮ  ಮೂಲ  ದೃಷ್ಟಿ ಗೆ   ಹೋಲಿಸಿದರೆ  ಉದ್ದೇಶಿತ ವಿನ್ಯಾಸವು  ರಚಿಸಲಾಗಿದೇಯೆ ಎಂದು  ನೋಡಲು ಸಹಾಯವಾಗುತ್ತದೆ.   ವಿನ್ಯಾಸವನ್ನು  ಈ ರೀತಿ  ನೋಡುವುದರಿಂದ ಉತ್ಪನ್ನಕ್ಕೆ  ಅಗತ್ಯವಿರುವ ಸುಧಾರಣೆಗಳನ್ನು ಮಾಡಿಕೊಳ್ಳಬಹುದು.   ಕಾರ್ಯಾಗಾರವು  ವಿದ್ಯಾರ್ಥಿಗಳಿಗೆ  ಆಂತರಿಕ ವಿನ್ಯಾಸದ  ಆವಿಷ್ಕಾರ ಮತ್ತು ಬಹುಮುಖ ಪ್ರತಿಭೆ ಯನ್ನು  ಅನಾವರಣಗೊಳಿಸಲು ವೇದಿಕೆಯಾಗಿದೆ  ಎಂದು  ಅಭಿಪ್ರಾಯಪಟ್ಟರು.         ವಿದ್ಯಾರ್ಥಿಗಳಿಗೆ  3ಡಿ  ಮಾಡೆಲ್ ತಯಾರಿಕೆ     ಸ್ಪರ್ಧೆಯನ್ನು  ಏರ್ಪಡಿಸಿ  ಬಹುಮಾನವನ್ನು  ವಿತರಿಸಿ       ಪ್ರೋತ್ಸಾಹಿಸಲಾಯಿತು .    ಇಂಟಿರಿಯರ್  ಡಿಸೈನ್  ವಿಭಾಗದ  ಸಹ  ಪ್ರಾಧ್ಯಾಪಕಿ   ಯಾದ ಕಾವ್ಯ  ಎಂ  ಸ್ವಾಗತಿಸಿ, ಪ್ರಾಧ್ಯಾಪಕರಾದ  ಪ್ರತೀಕ್ ಡಿ ಶೆಟ್ಟಿ  ವಂದಿಸಿದರು.


Share with

Leave a Reply

Your email address will not be published. Required fields are marked *