ಮನೆಯೊಳಗೆ ನಿದ್ರಿಸುತ್ತಿದ್ದ ಗೃಹಣಿ ನಾಗರಹಾವು ಕಚ್ಚಿ ದಾರುಣ ಮೃತ್ಯು

Share with


ಪೈವಳಿಕೆ: ಮನೆಯೊಳಗೆ ನಿದ್ರಿಸುತ್ತಿದ್ದ ಗೃಹಣಿಗೆ ನಾಗರ ಹಾವು ಕಚ್ಚಿ ಸಾವಿಗೀಡಾದ ದಾರುಣ ಘಟನೆ ನಡೆದಿದೆ.  ಪೈವಳಿಕೆ ಕುರುಡಪದವು ನಿವಾಸಿ [ದಿ] ಮಾಂಕು ರವರ ಪತ್ನಿ ಚೋಮು [೬೪] ಮೃತಪಟ್ಟ ದುರ್ದೆÊವಿಯಾಗಿದ್ದಾರೆ. ಜುಲೈ ೪ರಂದು ೧೨.೩೦ರ ವೇಳೆ ಘಟನೆ ನಡೆದಿದೆ. ಮನೆಯೊಳಗೆ ಚೋಮು ನಿದ್ರಿಸುತ್ತಿದ್ದರು. ರಾತ್ರಿ ೧೨.೩೦ರ ವೇಳೆ ಯಾವುದೋ ಜೀವಿ ಕೈಗೆ ಕಚ್ಚಿದ ಅನುಭವಗೊಂಡ ಚೋಮು ತಕ್ಷಣ ಎದ್ದು ಕೊಠಡಿಯೊಳಗೆ ಹುಡುಕಾಡಿದರೂ ಯಾವುದನ್ನೂ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಅವರ ಸಹೋದರ ಹಾಗೂ ಪರಿಸರದ ಸಂಬAಧಿಕರು ತಲುಪಿ ಅವರ ಕೈಯನ್ನು ನೋಡಿದಾಗ ಗಾಯ ಕಂಡುಬAದಿದೆ. ಹಾವಿನ ಕಡಿತವೆಂದು ಸಂಶಯದಿAದ  ಮನೆಯ ಮತ್ತೊಂದು ಕೊಠಡಿಯನ್ನು ನೋಡಿದಾಗ ನಾಗರ ಹಾವು ಕಂಡುಬAದಿದೆ. ಕೂಡಲೇ ಚೋಮು ರವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ಸಾವು ಸಂಭವಿಸಿದೆ. ಮೃತರು ಪುತ್ರಿ ಅಕ್ಕು, ಅಳಿಯ ಅಣ್ಣು, ಸಹೋದರರಾದ ಮತ್ತಾಡಿ, ಐತ್ತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.


Share with

Leave a Reply

Your email address will not be published. Required fields are marked *