ಮಂಗಳೂರು: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಸೆ.11ರಂದು ಬೆಳಿಗ್ಗೆ ತೆನೆ ಹಬ್ಬ ವನ್ನು ಸಂಭ್ರಮದಿಂದ ಆಚರಿಸಲಾಯಿತು.
ತೆನೆಯನ್ನು ದೇವಾಲಯದ ದ್ವಜಸ್ತಂಭದ ಮುಂಬಾಗದಿಂದ ಬ್ರಹ್ಮವಾಹಕರಾದ ವಾಸುದೇವ ಮಯ್ಯರು ಹಾಗೂ ಶಿವರಾಮ ಮಯ್ಯರು ದೇವಾಲಯದ ಮುಖಮಂಟಪದಲ್ಲಿಟ್ಟು ತೆನೆಗೆ ಅರ್ಚಕರಾದ ಅನಂತಪದ್ಮನಾಭ ಭಟ್ಟರು ಪೂಜೆಯನ್ನು ಸಲ್ಲಿಸಿದರು.
ಶ್ರೀ ಕ್ಷೇತ್ರದ ತಂತ್ರಿಗಳಾದ ಶ್ರೀ ವೆಂಕಟೇಶ ತಂತ್ರಿಗಳು, ಪ್ರಧಾನ ಅರ್ಚಕರಾದ ಮಾಧವ ಭಟ್, ರಾಮ ಭಟ್, ಪರಮೇಶ್ವರ ಭಟ್, ನಾರಾಯಣ ಭಟ್, ಆಡಳಿತ ಮಂಡಳಿಯ ಮುಕ್ತೇಸರರಾದ ಡಾ. ಮಂಜಯ್ಯ ಶೆಟ್ಟಿ, ಸೂರ್ಯನಾರಾಯಣ ರಾವ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ್ ಹಾಗೂ ಸರ್ವ ಭಕ್ತಾದಿಗಳು ಉಪಸ್ಥಿತರಿದ್ದರು.