ಕುಂದಾಪುರ: ಹನಿಟ್ರ್ಯಾಪ್ ಪ್ರಕರಣವೊಂದನ್ನು ದೂರು ನೀಡಿದ ಕೇವಲ 3 ಗಂಟೆಯೊಳಗೆ ಭೇದಿಸಿದ ಕುಂದಾಪುರ ಪೊಲೀಸರು ಮ ಹಿಳೆ ಸಹಿತ ಎಲ್ಲ ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.

ಆರೋಪಿಗಳಾದ ನಾವುಂದ ಬಡಾಕೆರೆಯ ಅಬ್ದುಲ್ ಸವಾದ್ ಯಾನೆ ಅಚ್ಚು (28), ಗುಲ್ವಾಡಿ ಬೋಳ್ಳಟ್ಟೆಯ ಸೈಪುಲ್ಲಾ (38), ಹಂಗಳೂರಿನ ಮೊಹಮ್ಮದ್ ನಾಸೀರ್ ಶರೀಫ್ (38), ಮೂಡುಗೋಪಾಡಿಯ ಅಬ್ದುಲ್ ಸತ್ತಾರ್ (23), ನಾಗೋಡಿಯ ಅಬ್ದುಲ್ ಅಜೀಜ್ (26) ಹಾಗೂ ಎಂಕೋಡಿಯ ಆಸ್ಮಾ (43) ಪೊಲೀಸ್ ಬಲೆಗೆ ಬಿದ್ದವರು. ಮಂಗಳೂರಿನಲ್ಲಿ ನೆಲೆಸಿರುವ ಕಾಸರ ಗೋಡು ಮೂಲದ ಸಂದೀಪ್ ಕುಮಾರ್ (37) ದೂರು ನೀಡಿದವ ರು.
ಘಟನೆ ವಿವರ
ಸಂದೀಪ್ 3 ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದಾಗ ಅಬ್ದುಲ್ ಸವಾದ್ ಮತ್ತು ಆತನ ಸ್ನೇಹಿತರಾದ ಉಳಿದ ಆರೋಪಿಗಳ ಪರಿಚ ಯವಾಗಿತ್ತು. ಆಸ್ಮಾ ಎನ್ನುವ ಮಹಿಳೆಯ ಪರಿಚಯ ಕೂಡ ಆ ಗಿತ್ತು. ತನ್ನೊಂದಿಗೆ ಅನೈತಿಕ ಸಂಬಂಧಕ್ಕೆ ಸಂದೀಪ್ ಅವರನ್ನು ಪ್ರೇರೇಪಿಸಿದ ಆಕೆ ಸೆ. 2ರ ಸಂಜೆ 6.30ಕ್ಕೆ ಕೋಟೇಶ್ವರಕ್ಕೆ ಬ ರುವಂತೆ ಹೇಳಿದ್ದಳು. ಅದರಂತೆ ಬಂದ ಸಂದೀಪ್‌ನನ್ನು ರಿಕ್ಷಾದಲ್ಲಿ ಆಸ್ಮಾ ಮೂಡುಗೋಪಾಡಿಯಲ್ಲಿರುವ ತನ್ನ ಬಾಡಿಗೆ ಮನೆಗೆ ಕ ರೆದುಕೊಂಡು ಹೋದಳು. ಅದೇ ವೇಳೆಗೆ ಉಳಿದ ಆರೋಪಿಗಳನ್ನು ಕರೆಸಿಕೊಂಡಿದ್ದಳು. ಆರೋಪಿಗಳೆಲ್ಲರೂ ಸೇರಿಕೊಂಡು 3 ಲಕ್ಷ ರೂ. ಹಣ ಕೊಟ್ಟು ಹೋಗಬೇಕು ಎಂದು ಬೆದರಿಸಿದರು. ಮೊಹಮ್ಮದ್ ನಾಸೀರ್ ಶರೀಫ್ ಹೆದರಿಸಿದ್ದನು.
ಹಣ ಲಪಟಾಯಿಸಿದ ಆರೋಪಿಗಳು
ಆಗ ಸಂದೀಪ್ ಹೆದರಿ ಓಡಿ ಹೋಗಲು ಪ್ರಯತ್ನಿಸಿದ್ದು, ಆರೋಪಿಗ ಳು ಅವರ ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿ ಕೈಯಿಂದ ಹಲ್ಲೆ ಮಾಡಿದರು. ಸೈಫುಲ್ಲಾ ರಾಡ್‌ನಿಂದ ಭುಜ, ಬೆನ್ನಿಗೆ ಹೊಡೆದು ಪ್ಯಾಂಟ್ ಜೇಬಿನಲ್ಲಿದ್ದ 6,200 ರೂ. ಅನ್ನು ಸೈಪುಲ್ಲಾ ಹಾಗೂ ಆ ಸ್ಮಾ ಬಲವಂತದಿಂದ ಕಸಿದುಕೊಂಡರು. ಅನಂತರ ಆಸ್ಮಾಳು ಗೂಗ ಲ್ ಪೇ ಮೂಲಕ ಹಣ ಹಾಕುವಂತೆ ಒತ್ತಾಯಿಸಿದಳು. ಸಂದೀಪ್ ತ ನ್ನ ಎಸ್‌ಬಿಐ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮೂಲಕ ಸೈಪುಲ್ಲಾನ ಮೊಬೈಲ್ ಸಂಖ್ಯೆಗೆ 5 ಸಾವಿರ ರೂ. ಹಣ ವರ್ಗಾವಣೆ ಮಾಡಿದರು.
ಆರೋಪಿಗಳು ಇನ್ನಷ್ಟು ಹಣ ಕಳುಹಿಸುವಂತೆ ಆಗ್ರಹಿಸಿದಾಗ ಸಂದೀಪ್ ಹಣವಿಲ್ಲವೆಂದರು. ಆಗ “ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಹುಗಿದು ಹಾಕುತ್ತೇವೆ’ ಎಂದು ಬೆದರಿಸಿ ಮತ್ತೆ ಹಲ್ಲೆ ಮಾಡಿದ ರು. ಇದರಿಂದ ಹೆದರಿದ ಸಂದೀಪ್ ಮತ್ತೆ ಸೈಪುಲ್ಲಾ ಮೊಬೈಲ್ ನಂಬರ್‌ಗೆ ಒಟ್ಟು 30 ಸಾವಿರ ರೂ. ವಗಾರ್ವಣೆ ಮಾಡಿದರು. ಆ ರೋಪಿಗಳು ಎಟಿಎಂ ಕಾರ್ಡನ್ನು ಕಿತ್ತುಕೊಂಡು ಪಿನ್ ನಂಬರ್ ಪ ಡೆದು ಸಂದೀಪನನ್ನು ಕೊಠಡಿಯಲ್ಲಿ ಕೂಡಿಹಾಕಿ 40 ಸಾವಿರ ರೂ. ಹಣ ನಗದೀಕರಿಸಿಕೊಂಡಿದ್ದಾರೆ. ಬಳಿಕ ಕಾರ್ಡನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ರಾತ್ರಿ 11.30ರ ಸುಮಾರಿಗೆ ಸಂದೀಪ್‌ನನ್ನು ಹೋಗು ಎಂದು ಹೇಳಿ ಬೆದರಿಸಿ ಕಳುಹಿಸಿದ್ದರು. ಬಳಿಕ ಸಂದೀಪ್ ಕುಂದಾಪುರ ನಗರ ಠಾಣೆಗೆ ಬುಧವಾರ ದೂರು ನೀಡಿದ್ದರು.
ಕ್ಷಿಪ್ರಗತಿಯಲ್ಲಿ ಬಂಧನ
ದೂರು ದಾಖಲಾಗುತ್ತಿದ್ದಂತೆ ಉಡುಪಿ ಎಸ್‌ಪಿ ಹರಿರಾಮ್ ಶಂಕರ ಆದೇಶದಂತೆ ಹೆಚ್ಚುವರಿ ಎಸ್‌ಪಿ ಸುಧಾಕರ ನಾಯ್ಕ ಮಾರ್ಗದರ್ಶ ನದಲ್ಲಿ, ಕುಂದಾಪುರ ಡಿವೈಎಸ್ಪಿ ಎಚ್. ಡಿ. ಕುಲಕರ್ಣಿ ನಿರ್ದೇಶನದ ಲ್ಲಿ ನಗರ ಠಾಣಾ ಎಸ್‌ಐಗಳಾದ ನಂಜಾ ನಾಯ್ಕ, ಪುಷ್ಪಾ ನೇತೃತ್ವದ ಲ್ಲಿ ಸಿಬಂದಿಯಾದ ಪ್ರೀನ್ಸ್, ಘನಶ್ಯಾಮ್, ಚಾಲಕರಾದ ರಾಜು, ನಾಗೇಶ, ಮಹಾಬಲ, ರಾಘವೇಂದ್ರ, ಗೌತಮ್, ಭಾಗೀರತಿ, ನಾಗ ಶ್ರೀ ಮತ್ತು ರೇವತಿ ಅವರ ತಂಡ ಕಾರ್ಯಾಚರಣೆ ನಡೆಸಿದ್ದು, ಆ ರೋಪಿಗಳನ್ನು ಕೋಟೇಶ್ವರದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದ ವೇಳೆ ಸಂದೀಪ್ ಬಳಿ ಸುಲಿಗೆ ಮಾಡಿರುವುದು ತಿಳಿದುಬಂದಿದೆ. ಆರೋಪಿಗಳನ್ನು ಕುಂದಾಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಂದಾಪುರ ನಗರ ಠಾಣೆಯಲ್ಲಿ ಬುಧವಾರ ಅಪಹರಣ ಹಾಗೂ ಸುಲಿಗೆ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಸ ರಗೋಡು ಮೂಲದ ಸಂದೀಪ್ ಕುಮಾರ್ ದೂರು ನೀಡಿದ್ದಾರೆ. ಅ ದರಂತೆ ಎಲ್ಲ 6 ಆರೋಪಿಗಳನ್ನು ಕ್ಷಿಪ್ರಗತಿಯಲ್ಲಿ ಕುಂದಾಪುರ ಪೊಲೀಸರ ತಂಡ ಬಂಧಿಸಿದ್ದಾರೆ. ಈ ಪೈಕಿ ಆಸ್ಮಾ ಹಾಗೂ ನಾಸೀರ್ ವಿರುದ್ಧ ಇದೇ ರೀತಿಯ ಕ್ರಿಮಿನಲ್ ಪ್ರಕರಣ ಇರುವುದಾಗಿ ತಿಳಿದುಬಂದಿದೆ. ಉಳಿದವರ ಕ್ರಿಮಿನಲ್ ಹಿನ್ನೆಲೆ ಪರಿಶೀಲಿಸ ಲಾಗುತ್ತಿದೆ – ಹರಿರಾಮ್ ಶಂಕರ್, ಉಡುಪಿ ಎಸ್‌ಪಿ




