ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆಗಳ ಓಡಾಟ; ವಿಡಿಯೋ ವೈರಲ್

Share with

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೂರು ಕುದುರೆಗಳು ಓಡಾಡುತ್ತಿದ್ದ ವೀಡಿಯೋ ವೈರಲ್ ಆಗಿದೆ. ಕುದುರೆ ಓಡಾಟದಿಂದಾಗಿ ಸ್ವಲ್ಪ ಸಮಯ ವಾಹನ ಸಂಚಾರಕ್ಕೂ ಆಡಚಣೆ ಉಂಟಾಗಿದೆ. ಹೆದ್ದಾರಿಯಲ್ಲಿ ಕುದುರೆ ಓಡಾಡುವುದನ್ನು ನೋಡಿದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆಗಳ ಓಡಾಟ

ಈ ಕುದುರೆಗಳು ಕುಂದಾಪುರ ತಾಲೂಕಿನ ಆರೂರಿನಿಂದ ತಪ್ಪಿಕೊಂಡು ಬಂದಿದ್ದವು ಎನ್ನಲಾಗಿದೆ. ಒಟ್ಟು ಐದು ಕುದುರೆಗಳು ತಪ್ಪಿಸಿಕೊಂಡಿದ್ದು, ಆ ಪೈಕಿ ಮೂರು ಕುದುರೆಗಳು ಹೆದ್ದಾರಿಯಲ್ಲಿ ಓಡುತ್ತಿರುವುದು ಕಂಡುಬಂದಿದೆ.

ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದಂತೆ ತಕ್ಷಣ ಕುದುರೆ ಮಾಲೀಕರು ಸ್ಥಳಕ್ಕೆ ಧಾವಿಸಿ ಕುದುರೆಗಳನ್ನು ಲಾಯಕ್ಕೆ ಕೊಂಡೊಯ್ದಿದ್ದಾರೆ. ಇನ್ನೂ ನಾಪತ್ತೆಯಾಗಿದ್ದ ಎರಡು ಕುದುರೆಗಳು ಸಿಕ್ಕಿವೆ ಎಂದು ಮಾಲೀಕರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *