ಪುತ್ತೂರು: ಅಕ್ಷಯ ಕಾಲೇಜಿನ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ವತಿಯಿಂದ ವಾಲ್ ಮ್ಯಾಗಜಿನ್ ಉದ್ಘಾಟನಾ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ರಕ್ಷಣ್ ಟಿ.ಆರ್. ಅವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳ ಸೃಜನಾತ್ಮಕತೆಯನ್ನು ಉತ್ತೇಜಿಸುವ ಈ ರೀತಿಯ ಕಾರ್ಯಕ್ರಮಗಳ ಮಹತ್ವವನ್ನು ಪ್ರಶಂಸಿಸಿದರು.
ಮುಖ್ಯ ಅತಿಥಿಯಾಗಿ ದುಬೈನ ಸೋಫಿಟೆಲ್ ಹೋಟೆಲ್‌ನ ಜೂನಿಯರ್ ಸೂ ಶೆಫ್ ಆಗಿರುವ ಶ್ರೀ ಪ್ರಶಾಂತ್ ಕೆ. ಅವರು ಭಾಗವಹಿಸಿ, ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡರು. ಅಟ್ಲಾಂಟಿಸ್ ದಿ ಪಾಮ್ ಮತ್ತು ಇಂಟರ್‌ಕಾಂಟಿನೆಂಟಲ್ ದುಬೈ ಮರೀನಾ ಹೋಟೆಲ್‌ಗಳಲ್ಲಿ ತಮ್ಮ ಅನುಭವಗಳನ್ನು ವಿವರಿಸಿದ ಅವರು, ಜಾಗತಿಕ ಹಾಸ್ಪಿಟಾಲಿಟಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಆಸಕ್ತಿ ಪರಿಶ್ರಮ ಮತ್ತು ನಿರಂತರ ಕಲಿಕೆಯ ಅಗತ್ಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ವಾಲ್ ಮ್ಯಾಗಜಿನ್ ಅನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ಕಾಯು ಸಂಘದ ವಿದ್ಯಾರ್ಥಿ ಪ್ರತಿನಿಧಿಯಾದ ಕು. ಗಗನ್ ಅವರು ವಾಲ್ ಮ್ಯಾಗಜಿನ್ ಉದ್ದೇಶ ಹಾಗೂ ವಿಷಯವಸ್ತುಗಳನ್ನು ಮುಖ್ಯ ಅತಿಥಿಗಳಿಗೆ ವಿವರಿಸಿ, ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಪರಿಶ್ರಮವನ್ನು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಶ್ರೀ ಅವಿನಾಶ್ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚಂದನ್ ಅವರ ಪ್ರಾಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು . ಯುವರಾಜ್ ಅವರು ಸ್ವಾಗತಿಸಿ. ನಿಖೇಶ್ ಅವರು ವಂಧಿಸಿದರು, ರಶ್ವಿನ್ ಅವರು ಕಾರ್ಯಕ್ರಮ ನಿರೂಪಿಸಿದರು.




