ಪೈವಳಿಕೆ: ಭಾರೀ ಮಳೆ, ಗಾಳಿಗೆ ಗುಡ್ಡೆ ಪರಿಸರದ ಬೃಹತ್ ಮರವೊಂದು ಮುರಿದು ಬಿದ್ದು ಮನೆ ಹಾನಿಗೊಂಡ ಘಟನೆ ನಡೆದಿದೆ. ಪೈವಳಿಕೆ ಪಂಚಾಯಿತಿನ ೧೯ನೇ ವರ‍್ಡಿನ ಕಳಾಯಿ ಪಾಡಿ ಎಂಬಲ್ಲಿರುವ ಅಬ್ದುಲ್ ಕರೀಂ ಎಂಬವರ ಹೆಂಚು ಹಾಸಿದ ಮನೆ ಹಾನಿಗೀಡಾಗಿದೆ. ಮನೆಯ ಹಿಂಬದಿಯ ಗುಡ್ಡೆಯಲ್ಲಿದ್ದ ಗಾಳಿ ಮರ ಜುಲೈ 17ರಂದು ಸಂಜೆ ಸುರಿದ ಗಾಳಿ ಮಳೆಗೆ ಮುರಿದು ಬಿದ್ದು ಮನೆಗೆ ಹಾನಿಯಾಗಿದೆ. ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪಂಚಾಯತ್ ಸದಸ್ಯ ಶ್ರೀನಿವಾಸ ಭಂಡಾರಿ, ವಿಲೇಜ್ ಆಫೀಸರ್ ಮೊಯ್ದೀನ್ ಕುಂಞಿ, ಎಂಬಿವರು ಬೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಸಂಜೆ ಸೋಂಕಾಲು ಕೊಡಂಗೆ ರಸ್ತೆಯಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇದರಿಂದ ಅಲ್ಪ ಹೊತ್ತು ಸಂಚಾರ ಮೊಟಕುಗೊಂಡಿತು. ಬಳಿಕ ಉಪ್ಪಳ ಅಗ್ನಿ ಶಾಮಕದಳ ತಲುಪಿ ಮರವನ್ನು ಕಡಿದು ತೆರವುಗೊಳಿಸಲಾಗಿದೆ.