ಉಪ್ಪಳ: ಸಿಡಿಲು ಬಡಿದು ಹೊಸತಾಗಿ ನಿರ್ಮಿಸಿದ ಕಾಂಕ್ರೀಟ್ ಮನೆ ಹಾಗೂ ಇದರ ಪರಿಸರದಲ್ಲಿದ್ದ ಹೆಂಚು ಹಾಸಿದ ಅಡುಗೆ ಮಾಡುವ ಕೊಠಡಿ ಹಾನಿಗೊಂಡು ತಾಯಿ ಹಾಗೂ ಇಬ್ಬರು ಮಕ್ಕಳಿಗೆ ಗಾಯ ಉಂಟಾದ ಘಟನೆ ನಡೆದಿದೆ. ಪೈವಳಿಕೆ ಪಂಚಾಯತ್‌ನ ಕಯ್ಯಾರು ಬೊಳಂಪಾಡಿ ನಿವಾಸಿ [ದಿ] ಸಂಜೀವ ರವರ ಪತ್ನಿ ಯಮುನ [೬೦], ಇವರ ಮಕ್ಕಳಾದ ಪ್ರಮೋದ್ [೨೮], ಸುಧೀರ್ [೨೧] ಎಂಬವರು ಗಾಯಗೊಂಡಿದ್ದು ಉಪ್ಪಳದ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಿನ್ನೆ ಸಂಜೆ ಸುಮಾರು ೪ಗಂಟೆಗೆ ಘಟನೆ ನಡೆದಿದೆ. ಜೋರಾಗಿ ಮಳೆ ಜೊತೆ ಸಿಡಿಲು ಕಾಂಕ್ರೀಟ್ ಮನೆಗೆ ಹಾಗೂ ಪರಿಸರದಲ್ಲಿದ್ದ ಹೆಂಚು ಹಾಸಿದ ಅಡುಗೆ ಮಾಡುವ ಕೋಣೆಗೆ ಬಡಿದೆ. ಈ ವೇಳೆ ಹೆಂಚು ಪುಡಿ ಪುಡಿಯಾಗಿ ಒಳಗಡೆ ಕುಳಿತ್ತಿದ್ದ ಪ್ರಮೋದ್ ಹಾಗೂ ಸುಧೀರ್‌ರವರ ಮೈಮೇಲೆ ಬಿದ್ದು ಗಾಯಗೊಂಡಿದ್ದು, ಇವರ ತಾಯಿ ಯಮುನ ರವರಿಗೆ ಸಿಡಿಲಿನ ಅಘಾತ ಉಂಟಾಗಿದೆ. ಕಾಂಕ್ರೀಟ್ ಮನೆ ಬಳಿಯಲ್ಲಿ ಹೆಂಚು ಹಾಸಿದ ಅಡುಗೆ ಮಾಡುವ ಕೊಠಡಿಯಲ್ಲಿ ಇವರು ಕುಳಿತ್ತಿದ್ದರು. ಈ ವೇಳೆ ಮಾಡು ಹಾನಿಗೊಂಡು ಹೆಂಚು ಬಿದ್ದು ಗಾಯಗೊಂಡಿದ್ದಾರೆ. ಕಾಂಕ್ರೀಟ್ ಮನೆಯ ಗೋಡೆ ಬಿರುಕು ಬಿಟ್ಟು ವಯರಿಂಗ್ ಪೂರ್ತಿ ಉರಿದಿದು ನಾಶಗೊಂಡಿದೆ. ಹೆಂಚು ಹಾಸಿದ ಅಡುಗೆ ಕೊಠಡಿ ಕೂಡಾ ಬಿರು ಬಿಟ್ಟು ಹಾನಿಗೊಂಡಿದೆ. ಸ್ಥಳಕ್ಕೆ ವಾರ್ಡ್ ಸದಸ್ಯ ಅವಿನಾಶ್ ಮಚಾಡೊ, ಬಿಜೆಪಿ ನೇತಾರರಾದ ಪ್ರದೀಪ್ ಪಟ್ಲ, ಪ್ರಸಾದ್ ರೈ ಕಯ್ಯಾರ್ ಮೊದಲಾದವರು ತಲುಪಿ ರಕ್ಷಣಾ ಕಾರ್ಯಕ್ಕೆ ಸಹಕರಿಸಿದರು.