ಕಾಸರಗೋಡು: ಕಾಂಞಂಗಾಡಿನಲ್ಲಿ ಗೃಹಿಣಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ರಿಮಾಂಡ್‌ನಲ್ಲಿರುವ ಆರೋಪಿ ಪೆರ್ಲ ನಿವಾಸಿ, ಪ್ರಸ್ತುತ ಕಣ್ಣೂರು ತಳಿಪರಂಬದಲ್ಲಿ ವಾಸಿಸುತ್ತಿದ್ದ ಶಿಹಾಬುದ್ದೀನ್(55) ನನ್ನು ವಶಕ್ಕೆ ತೆಗೆದುಕೊಳ್ಳಲು ಹೊಸದುರ್ಗ ಪೊಲೀಸರು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ವೈದ್ಯನೆಂದು ನಂಬಿಸಿ ಗೃಹಿಣಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು. ಮಹಿಳೆ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದರು. ರಿಮಾಂಡ್‌ನಿಂದ ವಶಕ್ಕೆ ತೆಗೆದುಕೊಂಡು ಸಮಗ್ರ ವಿಚಾರಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದಾರೆ. ಈತ ಕಾಸರಗೋಡು ಹಾಗು ಕಣ್ಣೂರು ಜಿಲ್ಲೆಗಳಲ್ಲಿ ವಂಚನೆ ನಡೆಸಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲೂ ಇದೇ ರೀತಿಯ ವಂಚನೆ ನಡೆಸಿದ್ದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.




