ಸಾವಿರ ಕಥೆ ಹೇಳುತ್ತೆ ಹೊಯ್ಸಳೇಶ್ವರ ದೇವಾಲಯದ ಶಿಲ್ಪಗಳು

Share with

ನಮ್ಮ ದೇಶದಲ್ಲಿ ಪುರಾತನವಾದ ದೇವಾಲಯಗಳು (Historical temple) ಸಾಕಷ್ಟು ಇವೆ. ಆ ಕಾಲದಲ್ಲಿ ನಿರ್ಮಾಣ ಮಾಡುತ್ತಿದ್ದ ಕೋಟೆಗಳು ಸೇರಿದಂತೆ ದೇವಾಲಯಗಳೆಲ್ಲಾ ವಿಶೇಷತೆಯಿಂದ ಕೂಡಿದ್ದವು. ಇದಕ್ಕೆ ಸಾಕ್ಷಿಯೆನ್ನುವಂತಿದೆ ಶಿವನಿಗೆ ಸಮರ್ಪಿತವಾಗಿರುವ ಈ ಹೊಯ್ಸಳೇಶ್ವರ ದೇವಾಲಯ (Hoysaleshwara temple). ಟೂರಿಸ್ಟ್ ಗೈಡ್ ಒಬ್ಬರು ಈ ಐತಿಹಾಸಿಕ ತಾಣಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಇಲ್ಲಿನ ದೇವಾಲಯದಲ್ಲಿನ ಶಿಲ್ಪಗಳು, ಕೆತ್ತನೆಯ ವಿಶೇಷತೆಯನ್ನು ವಿವರಿಸಿದ್ದಾರೆ. ಇಲ್ಲಿನ ಶಿಲ್ಪಗಳು ಅಮೋಘವಾದುದು. ದೇವಾಲಯವನ್ನು ಬಳಪದ ಕಲ್ಲುಗಳ ಬಳಕೆಯಿಂದ ನಿರ್ಮಾಣ ಮಾಡಲಾಗಿದೆ. ಕಲ್ಲಿನ ಈ ವಿಶೇಷ ಗುಣದಿಂದಲೇ ಹೊಯ್ಸಳರ ದೇವಾಲಯಗಳಲ್ಲಿ ಸೂಕ್ಷ್ಮ ಕಸೂರಿ ಕೆತ್ತನೆಯು ಬಹಳ ಆಕರ್ಷಕ ಎಂದಿದ್ದಾರೆ. ಈ ಪುರಾಣದ ಕಥೆಗಳು ಹಾಗೂ ಇತಿಹಾಸವನ್ನು ತೆರೆದಿಡುವ ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Dr. Ayur Harish AL’s Creativity ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಟೂರಿಸ್ಟ್ ಗೈಡ್ ಒಬ್ಬರು, ಹೊಯ್ಸಳೇಶ್ವರ ದೇವಾಲಯದ ಶಿಲ್ಪ ಕಲೆಗಳು ಹಾಗೂ ಕೆತ್ತನೆಯನ್ನು ಬಹಳ ಸೊಗಸಾಗಿ ವಿವರಿಸಲಾಗಿದೆ. ಈ ವಿಡಿಯೋದಲ್ಲಿ ಪ್ರತಿಯೊಂದು ಕೆತ್ತನೆಯ ಹಿಂದಿನ ವಿಶೇಷತೆ, ಸೂಕ್ಷ್ಮವಾದ ಕಸೂರಿಗೆ ಒತ್ತು ನೀಡಲಾದ ರೀತಿ, ಆಭರಣಗಳ ವಿನ್ಯಾಸದಲ್ಲಿ ಕಲಾತ್ಮಕತೆ, ಹಿಂದೂ ಸಂಬಂಧಿತ ದಂತಕಥೆಗಳನ್ನು ಚಿತ್ರಿಸಿರುವುದನ್ನು ಕಾಣಬಹುದು. ರಾಮಾಯಣ, ಮಹಾಭಾರತ ಸೇರಿದಂತೆ ಪುರಾಣ ಪ್ರಸಿದ್ಧ ಕಥೆಗಳನ್ನು ಹೇಳುವ ಶಿಲ್ಪಗಳ ಆಕರ್ಷಕ ಕೆತ್ತನೆಗಳನ್ನು ನೀವಿಲ್ಲಿ ನೋಡಬಹುದಾಗಿದೆ. ದೇವಾಲಯದ ಮುಂದೆ ದೊಡ್ಡ ನಂದಿ ಮೂರ್ತಿಯುಳ್ಳ ನಂದಿಮಂಟಪ ಹಾಗೂ ಅದರ ಅಲಂಕಾರವನ್ನು ಸೂಕ್ಷ್ಮವಾಗಿ ವಿವರಿಸಿರುವುದನ್ನು ನೋಡಬಹುದು.


Share with

Leave a Reply

Your email address will not be published. Required fields are marked *