ಮಧೂರಿನಲ್ಲಿ ವಿಶ್ವರೂಪಂ ಯುವ ಸಮಾವೇಶ-2024ರ ಸಾಂಸ್ಕೃತಿಕ ಸ್ಪರ್ಧೆಗೆ ಬಹು ಜ‌ನ ಸ್ಪಂದನೆ

Share with

ಮಧೂರು : ಮಧೂರು ಶ್ರೀ ಕಾಳಿಕಾಂಬ ಮಠದಲ್ಲಿ ವಿಶ್ವಬ್ರಾಹ್ಮಣ ಯುವಕ ಸಂಘ ಮಧೂರು ಇದರ ವತಿಯಿಂದ ನಡೆಯುವ ವಿಶ್ವರೂಪಂ ಯುವ ಸಮಾವೇಶದ ಮೂರನೇ ಸ್ಪರ್ಧಾ ಕ್ರಾರ್ಯಕ್ರಮವಾದ ಸಾಂಸ್ಕೃತಿಕ ಸ್ಪರ್ಧೆ ಅಪಾರ ಸ್ಪಂದನೆಯೊಂದಿಗೆ ಯಶಸ್ವಿಯಾಯಿತು.

ಕ್ರಾರ್ಯಕ್ರಮದಲ್ಲಿ ಕೆ.ಪ್ರಭಾಕರ ಆಚಾರ್ಯ ಕೋಟೆಕ್ಕಾರು ಮಾತನಾಡಿದರು.

ವಿವಿಧ ಸ್ಪರ್ಧೆಗಳಲ್ಲಿ ಪುಟಾಣಿಗಳು, ಮಹಿಳೆಯರು, ಯುವಕರು ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಠದ ಅಧ್ಯಕ್ಷರಾದ ಕೆ.ಪ್ರಭಾಕರ ಆಚಾರ್ಯ ಕೋಟೆಕ್ಕಾರು ಇವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು “ಇಂದಿನ ಯುವ ಜನಾಂಗಕ್ಕೆ ಸಾಂಸ್ಕೃತಿಕ ಮತ್ತು ಸಂಸ್ಕಾರಕ್ಕಿರುವ ಒಲವು ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಸಮಾಜದ ಯುವ ಸಮೂಹವನ್ನು ಒಂದುಗೂಡಿಸುವ ಹಿರಿಮೆ ನಮ್ಮ ಶ್ರೀ ಮಠದ ಯುವಕ ಸಂಘಕ್ಕೆ ಇದೆ ಎಂದು ನಮಗೆ ಹೆಮ್ಮೆಯ ವಿಷಯ” ಎಂದು ನುಡಿದರು.

ಸಭೆಯ ಅಧ್ಯಕ್ಷತೆಯನ್ನು ಯುವಕ ಸಂಘದ ಅಧ್ಯಕ್ಷರಾದ ಮಹೇಶ್ ಆಚಾರ್ಯ, ಮಧೂರು ವಹಿಸಿದರು. ಬಳಿಕ ನಿಕಟಪೂರ್ವ ಅಧ್ಯಕ್ಷರಾದ ಪರಮೇಶ್ವರ ಆಚಾರ್ಯರು ಮಾತನಾಡಿ ಯುವಕ ಸಂಘದ ಈ ಪ್ರಯತ್ನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ನಿವೃತ್ತ ಸುಬೈದಾರ್ ವೈ.ಧರ್ಮೇಂದ್ರ ಆಚಾರ್ಯ, ಮಾಜಿ ಅಧ್ಯಕ್ಷರಾದ ಪುರುಷೋತ್ತಮ ಆಚಾರ್ಯ ಕಂಬಾರು, ಮಹಿಳಾ ಸಂಘದ ಮಾಜಿ ಅಧ್ಯಕ್ಷರಾದ ಕನಕ ಪ್ರಭಾಕರ ಆಚಾರ್ಯ, ಕೋಟೆಕ್ಕಾರು ಉಪಸ್ಥಿತರಿದ್ದರು. ವಿಭಿನ್ನ ದೃಷ್ಠಿಕೋನವನ್ನಿರಿಸಿ ಯುವಕ ಸಂಘದ ನೇತೃತ್ವದಲ್ಲಿ ಫೆ.11ಕ್ಕೆ ಜರಗುವ “ವಿಶ್ವರೂಪಂ ಯುವ ಸಮಾವೇಶ-2024″ರ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

"ವಿಶ್ವರೂಪಂ ಯುವ ಸಮಾವೇಶ-2024"ರ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಯುವಕ ಸಂಘದ ಕೋಶಾಧಿಕಾರಿಯಾದ ಯತಿರಾಜ್ ಆಚಾರ್ಯ ನೆಕ್ರಾಜೆ ಸ್ವಾಗತಿಸಿ, ಸಂಘದ ಉಪಾಧ್ಯಕ್ಷರಾದ ಜ್ಞಾನೇಶ್ ಆಚಾರ್ಯ ನೀರ್ಚಾಲು ವಂದಿಸಿದರು. ಜಿತೇಶ್ ಆಚಾರ್ಯ ಕುಂಬಳೆ ನಿರೂಪಿಸಿದರು.


Share with

Leave a Reply

Your email address will not be published. Required fields are marked *