ಉಪ್ಪಳ: ಮಳೆ, ಗಾಳಿಗೆ ಹಲವು ಕೃಷಿಕರ ಕಂಗಿನ ಮರಗಳು ಮುರಿದು ಬಿದ್ದು ಭಾರೀ ಪ್ರಮಾಣದ ನಾಶನಷ್ಟ ಉಂಟಾದ ಘಟನೆ ನಡೆದಿದೆ. ಮಂಗಲ್ಪಾಡಿ ಪಂಚಾಯತ್‌ನ ೧೨ನೇ ವಾರ್ಡ್ ನ ಇಚ್ಲಂಗೋಡು ಬಳಿಯ ಮಲೆಂದೂರು ನಿವಾಸಿ ಹಿರಿಯ ಕೃಷಿಕ ಭಾಸ್ಕರ ರಾವ್ ಒಬರ್ಲೆ ಎಂಬವರ ಸುಮಾರು ಮೂರು ಎಕ್ಕರೆ ಸ್ಥಳದಲ್ಲಿರುವ ತೋಟದಲ್ಲಿ ೨೦೦ಕ್ಕೂ ಅಧಿಕ ಫಲ ಕೊಡುವ ಅಡಿಕೆ ಮರಗಳು, ತೆಂಗು, ಬಾಳೆ ಗಿಡಗಳು ಗಾಳೆ, ಮಳೆಗೆ ಮುರಿದು ಬಿದ್ದು ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಂಗಲ್ಪಾಡಿ ಕೃಷಿ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಇಚ್ಲಂಗೋಡು ಕೋಮಾರ್ ಹೌಸ್‌ನ ಪ್ರದೀಪ್ ಶೆಟ್ಟಿ, ಮಲೆಂದೂರು ಬಾವು, ಕೆದ್ವಾರು ಕೋಚಪ್ಪ ಶೆಟ್ಟಿ, ಇಚ್ಲಂಗೋಡು ಸಂಕಯ್ಯ ಶೆಟ್ಟಿ ಎಂಬವರ ತೋಟದಲ್ಲೂ ಹಲವು ಅಡಿಕೆ ಮರಗಳು ಮುರಿದು ಬಿದ್ದಿದೆ. ನಾಶ ನಷ್ಟದಿಂದ ಕೃಷಿಕರು ಸಂಕಷ್ಟಕ್ಕೀಡಾಗಿದ್ದಾರೆ.