ಮುಂಬೈ: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ, ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

UKಯಲ್ಲಿದ್ದ ಇವರು ಪೋಲೊ ಆಡುತ್ತಿದ್ದಾಗ ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. ಸಾವಿಗೂ ಮುನ್ನ ಸಂಜಯ್ ಅವರು ಅಹಮದಾಬಾದ್-ಲಂಡನ್ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪ ಸೂಚಿಸಿ ಪೋಸ್ಟ್ ಹಾಕಿದ್ದರು. ಸಂಜಯ್ ನಟಿ ಕರಿಷ್ಮಾ ಅವರನ್ನು 2003ರಲ್ಲಿ ವಿವಾಹವಾದರು. 2016 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಮಗಳು ಸಮೈರಾ ಮತ್ತು ಮಗ ಕಿಯಾನ್ ಇದ್ದಾರೆ.




