ಪಾಟ್ನಾ: ಯುವತಿಯೊಬ್ಬರ ಹಿಜಾಬ್ ಎಳೆದು ವಿವಾದಕ್ಕೀಡಾಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ನಡೆಯನ್ನು ಬಿಹಾರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಾಮಾ ಖಾನ್ ಸಮರ್ಥಿಸಿಕೊಂಡಿದ್ದಾರೆ.

ತಂದೆಯ ಭಾವನೆಯಲ್ಲಿ ನಿತೀಶ್ ಕುಮಾರ್ ಯುವತಿಯ ಹಿಜಾಬ್ ಎಳೆದಿದ್ದರು. ಆ ಯುವತಿಯ ತಂದೆಗಿಂತಲೂ ಸಿಎಂ ಹಿರಿಯರು. ಅವರ ಉದ್ದೇಶ ಅಷ್ಟೇ ಇತ್ತು ಎಂಬುದು ನನಗೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು ಎಂದು ಜಾಮಾ ಹೇಳಿದ್ದಾರೆ.
ಸೋಮವಾರ 1,000ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ಸಿಎಂ ನಿತೀಶ್ ಕುಮಾರ್ ನೇಮಕಾತಿ ಪತ್ರ ವಿತರಿಸಿದ್ದು, ಈ ವೇಳೆ ಪತ್ರ ಪಡೆಯಲು ಬಂದಿದ್ದ ನುಸ್ರತ್ ಪರ್ವೀನ್ ಎಂಬ ಯುವತಿಯ ಹಿಜಾಬು ಎಳೆದು ಟೀಕೆಗೆ ಗುರಿಯಾಗಿದ್ದಾರೆ.




