ಜನರ ಆಶೀರ್ವಾದ ಇರುವವರೆಗೂ ನಾನೆ CM ಆಗಿರುತ್ತೇನೆ. ನವೆಂಬರ್ ಕ್ರಾಂತಿಯು ಇಲ್ಲ, ಬ್ರಾಂತಿಯು ಇಲ್ಲ ಎಂದು CM ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ CM, 2 ವರ್ಷದ ಬಳಿಕ ಸಂಪುಟ ಪುನಾರಚನೆ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದಕ್ಕೆ ಎಲ್ಲರೂ ಕೂಡ ಕ್ರಾಂತಿ ಅಂತ ತಿಳಿದುಕೊಂಡಿದ್ದರು.

ಆದರೆ, ಯಾವ ಕ್ರಾಂತಿಯು ಇಲ್ಲ ಯಾವ ಬ್ರಾಂತಿಯು ಇಲ್ಲ. ರಾಜ್ಯದಲ್ಲಿ ಮತ್ತೊಮ್ಮೆ ನಾವೇ ಅಧಿಕಾರಕ್ಕೆ ಬರುತ್ತೇವೆ. ನಾನೇ ಮುಂದಿನ ಬಜೆಟ್ ಮಂಡಿಸುತ್ತೇನೆ ಎಂದು ಹೇಳಿದ್ದಾರೆ.




